ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಯಥಾವತ್ತಾಗಿ ಮುಂದುವರಿಸಬೇಕು. ಪುನೀತ್ ಅಭಿಮಾನಿಗಳು ಚಿತ್ರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಇಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಮನವಿ ಮಾಡಿದ್ದಾರೆ. ಜೇಮ್ಸ್ ಚಿತ್ರ ಎತ್ತಂಗಡಿಗೆ ಬಿಜೆಪಿ ಶಾಸಕರ ಒತ್ತಡ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವು ಎಲ್ಲ ಚಿತ್ರಕ್ಕೂ ಪ್ರಾಶಸ್ತ್ಯ ಕೊಡ್ತೇವೆ. ಆಂಧ್ರ, ತೆಲಂಗಾಣದಲ್ಲೂ ಜೇಮ್ಸ್ ಚಿತ್ರ ಯಶಸ್ವಿಯಾಗಿ ನಡೆಯುತ್ತಿದೆ. ಇದರಲ್ಲಿ ಯಾವುದೇ ರಾಜಕಾರಣ ಬೆರೆಸುವುದು ಬೇಡ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬ ಬೇಧ - ಭಾವ ಬೇಡ ಎಂದಿದ್ದಾರೆ.
ಜೇಮ್ಸ್ ಚಿತ್ರದ ಪ್ರದರ್ಶನ ಯಥಾವಾತ್ತಾಗಿ ಮುಂದುವರಿಸಬೇಕು: ಕುಮಾರ ಬಂಗಾರಪ್ಪ ಒತ್ತಾಯ - ಜೇಮ್ಸ್ ಚಿತ್ರದ ಬಗ್ಗೆ ಶಾಸಕ ಕುಮಾರ ಬಂಗಾರಪ್ಪ ಹೇಳಿಕೆ
ಪುನೀತ್ ಅಭಿಮಾನಿಗಳು ಜೇಮ್ಸ್ ಚಿತ್ರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಇಟ್ಟಿದ್ದಾರೆ. ಜೇಮ್ಸ್ ಚಿತ್ರವನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂದು ಶಾಸಕ ಕುಮಾರ ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
![ಜೇಮ್ಸ್ ಚಿತ್ರದ ಪ್ರದರ್ಶನ ಯಥಾವಾತ್ತಾಗಿ ಮುಂದುವರಿಸಬೇಕು: ಕುಮಾರ ಬಂಗಾರಪ್ಪ ಒತ್ತಾಯ mla-kumar-bangarappa-on-james-movie](https://etvbharatimages.akamaized.net/etvbharat/prod-images/768-512-14810418-thumbnail-3x2-raaaa.jpg)
ಜೇಮ್ಸ್ ಚಿತ್ರ ಯಥವಾತ್ತಾಗಿ ಮುಂದುವರಿಯಬೇಕು: ಕುಮಾರ ಬಂಗಾರಪ್ಪ
ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ
ಚಿತ್ರ ಯಶಸ್ವಿಯಾಗಿ ನಡೆಯಲು ಅವಕಾಶ ಮಾಡಿಕೊಡಬೇಕು. ಬಿಜೆಪಿ ಶಾಸಕರ ಒತ್ತಡವಿದೆ ಅನ್ನೋದು ಸ್ಪೆಕ್ಯುಲೇಶನ್. ಕಾಶ್ಮೀರಿ ಫೈಲ್ಸ್ ಚಿತ್ರ ಎಲ್ಲರೂ ವೀಕ್ಷಣೆ ಮಾಡಿ. ಎರಡೂ ಚಿತ್ರಗಳನ್ನು ಎಲ್ಲರೂ ನೋಡಬೇಕು ಎಂದು ಕುಮಾರ ಬಂಗಾರಪ್ಪ ಮನವಿ ಮಾಡಿದರು.
ಇದನ್ನೂ ಓದಿ:ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸ ಆರಂಭವಾಗಿದೆ: ಹೆಚ್ಡಿಕೆ
Last Updated : Mar 23, 2022, 2:19 PM IST