ಕರ್ನಾಟಕ

karnataka

ETV Bharat / city

ಚಂದ್ರು ಕೊಲೆ ಪ್ರಕರಣ : ಎಂಎಲ್​ಸಿ ರವಿಕುಮಾರ್ ವಿರುದ್ಧ ಜಮೀರ್ ಅಹ್ಮದ್​ ಕಿಡಿ

ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ವಿರುದ್ಧ ಬೆರಳು ತೋರಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು..

jameer-ahmad
ಜಮೀರ್ ಅಹ್ಮದ್​

By

Published : Apr 9, 2022, 8:28 PM IST

ಬೆಂಗಳೂರು :ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರನ್ನು ಪ್ರಜ್ಞಾವಂತರು, ಅನುಭವಿಗಳು ಎಂದು ಭಾವಿಸಿದ್ದೆ. ಆದರೆ, ಅವರು ಛಲವಾದಿಪಾಳ್ಯದ ಯುವಕ ಚಂದ್ರುವಿನ ಕೊಲೆ ಪ್ರಕರಣಕ್ಕೆ ಇಲ್ಲದ ಕಥೆಗಳನ್ನು ತಳುಕು ಹಾಕಿ ಕೀಳುಮಟ್ಟದ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪ್ರಕರಣದ ತನಿಖೆ ಮಾಡುವವರು ಪೊಲೀಸರು. ಬಿಜೆಪಿ ಅಥವಾ ಆರ್​ಎಸ್​ಎಸ್ ಅಲ್ಲ. ಮನಬಂದಂತೆ ಕೀಳುಮಟ್ಟದ ಹೇಳಿಕೆ ನೀಡಿರೋ ಎಂಎಲ್​ಸಿ ರವಿಕುಮಾರ್ ಅವರೂ ಅಲ್ಲ. ಏಪ್ರಿಲ್ 5ರ ರಾತ್ರಿ ನಡೆದ ಘಟನೆ ಕುರಿತು ಖುದ್ದು ಸೈಮನ್ ನೀಡಿರುವ ಹೇಳಿಕೆಯ ಎಫ್ಐಆರ್ ಪ್ರತಿಯನ್ನು ಪೊಲೀಸ್ ಆಯುಕ್ತ ಮಾನ್ಯ ಕಮಲ್ ಪಂತ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದರು.

ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ವಿರುದ್ಧ ಬೆರಳು ತೋರಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.

ಓದಿ:ಕೊನೆಗೂ ಕೆಪಿಸಿಸಿ ಉಪಾಧ್ಯಕ್ಷ, ಪದಾಧಿಕಾರಿಗಳ ನೇಮಿಸಿದ ಹೈಕಮಾಂಡ್.. ಸರ್ವರಿಗೂ ಸಮಪಾಲು..

ABOUT THE AUTHOR

...view details