ಬೆಂಗಳೂರು:ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆಯ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಒಟ್ಟುಗೂಡಿ ಸಹಕಾರ ವ್ಯವಸ್ಥೆಯನ್ನು ಸದೃಢಗೊಳಿಸಿ ಪುನರ್ ನಿರ್ಮಾಣ ಮಾಡಲು ಪ್ರಯತ್ನಿಸಬೇಕೆಂದು ಶಾಸಕ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು ಕರೆ ನೀಡಿದರು.
ಸಹಕಾರ ಮಹಾಮಂಡದಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಟಿಡಿ 100ಕ್ಕೂ ಹೆಚ್ಚು ರಾಷ್ಟ್ರಗಳು ಸಹಕಾರ ವ್ಯವಸ್ಥೆಯನ್ನು ಜಾರಿಗೊಳಿಸಿರುವಾಗ 30 ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳಿರುವಾಗ ಹಾಗೂ 110 ಕೋಟಿ ಸದಸ್ಯ ಬಳಗವಿದ್ದು, ಬೃಹತ್ ಸಹಕಾರಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಕೊರೊನಾ ಸೋಂಕಿನ ಸಂದರ್ಭದಲ್ಲಿ ವಿಶ್ವದಾದ್ಯಂತ ಸಹಕಾರಿ ವ್ಯವಸ್ಥೆ ದಿಟ್ಟತನದಿಂದ ಕೆಲಸ ಮಾಡಿರುವುದನ್ನು ಕಂಡಿದ್ದೇವೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆಯ ಕಾರ್ಯಕ್ರಮ ಭಾರತದಲ್ಲಿ ನಡೆದ ಕೃಷಿ ಕ್ರಾಂತಿ ಮತ್ತು ಇತರ ಕ್ರಾಂತಿಗಳಿಗೆ ಸಹಕಾರಿ ವ್ಯವಸ್ಥೆ ಕಾರಣವಾಗಿದ್ದು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರೂ. ಸಹಾಯಧನ ನೀಡುತ್ತಿರುವುದು ಸಹಕಾರಿ ವ್ಯವಸ್ಥೆಗೆ ಹೆಗ್ಗಳಿಕೆಯಾಗಿದೆ. ಮಾಧ್ಯಮ ಮಿತ್ರರೂ ಸೇರಿದಂತೆ ಎಲ್ಲಾ ವರ್ಗದ ಜನರು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಹಕಾರಿ ವ್ಯವಸ್ಥೆಯ ಲಾಭವನ್ನು ಪಡೆದುಕೊಳ್ಳಬೇಕು, ಪರಸ್ಪರ ಸಹಕಾರ, ಪ್ರೀತಿ ವಿಶ್ವಾಸಗಳಿಂದ ಜೀವನ ಸಾಗಿಸಲು ಸಹಕಾರ ತತ್ವಕ್ಕೆ ಮೊರೆಹೋಗುವುದೊಂದೇ ದಾರಿ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆಯ ಕಾರ್ಯಕ್ರಮ 1923ರಲ್ಲಿ ಒಂದು ಅಸ್ತಿತ್ವದಲ್ಲಿದ್ದ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳು ನಿರ್ಣಯವನ್ನು ಅಂಗೀಕರಿಸಿ ಪ್ರತಿವರ್ಷ ಜುಲೈ ತಿಂಗಳ ಮೊದಲ ಅಂತಾರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಲು ತೀರ್ಮಾನಿಸಿದವು. ಈ ತೀರ್ಮಾನವನ್ನು ಒಪ್ಪಿಕೊಂಡ ವಿಶ್ವಸಂಸ್ಥೆ, 1992 ರಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿ ಜುಲೈ ಮೊದಲ ಶನಿವಾರ ಅಂತಾರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಲಾಗುತ್ತಿದೆ. 1995ರಿಂದ ಜಾರಿಗೆ ಬಂದಿದ್ದು, ನಿರಂತರವಾಗಿ ಆಚರಣೆಯಲ್ಲಿದೆ.
ರಾಜ್ಯದ ಆರ್ಥಿಕ ಬೆಳವಣಿಗೆಗೆ ಜನರ ಬದುಕು ಹಸನಾಗಲು ಸಹಕಾರ ಕ್ಷೇತ್ರವೊಂದೇ ಸಮರ್ಥ ಎಂಬುದು ಮನದಟ್ಟಾಗಿದೆ. ಇನ್ನು ಸಹಕಾರಿ ಚಳವಳಿಯನ್ನು ಬಲಪಡಿಸುವುದೇ ನಮ್ಮ ಮುಂದಿರುವ ಗುರಿಯಾಗಬೇಕು. ಭಾರತದಲ್ಲಿ 8 ಲಕ್ಷ ಸಹಕಾರ ಸಂಸ್ಥೆಗಳಿದ್ದು, 30 ಕೋಟಿ ಸದಸ್ಯ ಬಳಗವಿದೆ. ಯುವಜನರು ಮತ್ತು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಚಳವಳಿಗೆ ಬಂದು ಸಹಕಾರ ಸಂಘ ಸಂಸ್ಥೆಗಳನ್ನು ಸದೃಢಗೊಳಿಸಬೇಕು. ಇಂತಹ ಜಾಗೃತಿಯನ್ನು ಜನತೆಯಲ್ಲಿ ಮೂಡಿಸುವುದಕ್ಕಾಗಿಯೇ ಅಂತಾರಾಷ್ಟ್ರೀಯ ಸಹಕಾರ ದಿನದ ಆಚರಣೆ ನಡೆಯುತ್ತಾ ಬಂದಿದೆ ಎಂದು ಜಿಟಿಡಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಕಾಶ್ಮೀರದಲ್ಲಿ ಕಂದಕಕ್ಕೆ ವಾಹನ ಉರುಳಿ ಐದು ಮಂದಿ ದುರ್ಮರಣ: ಪ್ರಧಾನಿ ಸಂತಾಪ
ದಿನಾಚರಣೆಯ ಈ ಸಂದರ್ಭದಲ್ಲಿ ಜನಸಮೂಹ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವ ಹೆಚ್ಚಿನ ಸಂಖ್ಯೆಯು ಜನರನ್ನು ಸಹಕಾರಿ ಸಂಸ್ಥೆಗಳ ಸದಸ್ಯರನ್ನಾಗಿ ಮಾಡುವ, ಸಂಸ್ಥೆಗಳ ಲಾಭವನ್ನು ಪಡೆದುಕೊಳ್ಳುವ ಪಣತೊಡಬೇಕಾಗಿದೆ ಎಂದು ಜಿಟಿಡಿ ಕರೆ ನೀಡಿದ್ದು, ಕಾರ್ಯಕ್ರಮದಲ್ಲಿ ಮಹಾಮಂಡಳದ ನಿರ್ದೇಶಕರಾದ ಎ.ಸಿ ನಾಗರಾಜ್ ಮತ್ತು ಶಿವಪ್ರಸಾದ್ ಉಪಸ್ಥಿತರಿದ್ದರು.