ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ ಭೇಟಿ ಮಾಡಿ ಸಮಾಲೋಚಿಸಿದ ಅಖಂಡ ಶ್ರೀನಿವಾಸಮೂರ್ತಿ - MLA Akhanda srinivasa murthy met Siddaramaiah

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಗಲಭೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

MLA Akhanda srinivasa murthy met Siddaramaiah
ಸಿದ್ದರಾಮಯ್ಯ ಭೇಟಿ ಮಾಡಿ ಸಮಾಲೋಚಿಸಿದ ಅಖಂಡ ಶ್ರೀನಿವಾಸಮೂರ್ತಿ

By

Published : Aug 29, 2020, 4:29 PM IST

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಘಟನೆಯನ್ನು ನಾನು ಖಂಡಿಸಿದ್ದೇನೆ. ಶ್ರೀನಿವಾಸ್ ಮೂರ್ತಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ತಿದ್ದಾರೆ. ಅತಿ ಹೆಚ್ಚು ಮತ ಪಡೆದು ಗೆದ್ದವರು ಅವರು. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಯಾರೇ ಆಗಿರಲಿ ಅವರ ಮೇಲೆ ಕ್ರಮವಾಗಬೇಕು. ಅಖಂಡ ಜೊತೆ ಎರಡು ಬಾರಿ ಫೋನ್​ನಲ್ಲಿ ಮಾತನಾಡಿದ್ದೆ. ಇವತ್ತು ಅವರು ನನ್ನನ್ನ ಭೇಟಿ ಮಾಡಿದ್ದಾರೆ. ಇನ್ನೆರಡು ದಿನದಲ್ಲಿ ನಾನು ಅಲ್ಲಿಗೆ ‌ಹೋಗ್ತೇನೆ. ತನಿಖೆ ನಡೆಯುತ್ತಿದೆ ಈಗಲೇ ಏನೂ‌ ಹೇಳಲ್ಲ ಎಂದರು.

ಸಿದ್ದರಾಮಯ್ಯ ಭೇಟಿ ಮಾಡಿ ಸಮಾಲೋಚಿಸಿದ ಅಖಂಡ ಶ್ರೀನಿವಾಸಮೂರ್ತಿ

ನ್ಯಾಯಾಂಗ ತನಿಖೆ ಆಗಲಿ

ಘಟನೆಯ ಹಿಂದೆ ಯಾರ ಕೈವಾಡವಿದೆ ಗೊತ್ತಿಲ್ಲ. ತನಿಖೆಯಿಂದ ಅದು ಹೊರಬರಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಶ್ರೀನಿವಾಸ್ ಮೂರ್ತಿಗೆ ನ್ಯಾಯ ಸಿಗಬೇಕು. ಸರ್ಕಾರ ತ್ವರಿತ ಕ್ರಮತೆಗೆದುಕೊಂಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇಂಟೆಲೆಜೆನ್ಸಿ ಏನ್ಮಾಡ್ತಿತ್ತು. ಕೂಡಲೇ ಕಾರ್ಯೋನ್ಮುಖರಾಗಿದ್ದರೆ ಅವಘಡ ತಪ್ಪಿಸಬಹುದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಆಯುಕ್ತರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ ಅವರು, ಡಿಜೆಹಳ್ಳಿಯಲ್ಲಿ ಡ್ರಗ್ಸ್ ಮಾಫಿಯಾ ತಳುಕು ವಿಚಾರವಾಗಿ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ಘಟನೆಯ ನ್ಯಾಯಾಂಗ ತನಿಖೆ ಆಗಲೇಬೇಕು. ಇದರ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೇನೆ ಎಂದರು.

ಇನ್ನೂ ನೋವಿನಲ್ಲಿ ಇದ್ದೇನೆ

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದೇನೆ. ನಮ್ಮ‌ ಸಮಸ್ಯೆಗಳನ್ನೂ‌ ಅವರ ಗಮನಕ್ಕೆ ತಂದಿದ್ದೇನೆ. ಅವರು ನಮ್ಮ ನಾಯಕರು. ಎರಡ್ಮೂರು ದಿನದಲ್ಲಿ ಅವರು ಅಲ್ಲಿಗೆ ಭೇಟಿ ನೀಡ್ತಾರೆ. ನಮ್ಮ‌ ಮನೆ ಪರಿಸ್ಥಿತಿ ನೀವೇ ನೋಡಿದ್ದೀರ. ನಾನು, ಕುಟುಂಬ ಇನ್ನೂ ನೋವಿನಲ್ಲೇ ಇದ್ದೇವೆ. ಕ್ಷೇತ್ರದ ಜನ ನಮ್ಮ‌ಜೊತೆ ಇದ್ದಾರೆ‌. ಸಿದ್ದರಾಮಯ್ಯನವರು ಧೈರ್ಯ ತುಂಬಿದ್ದಾರೆ. ಅವರೇ ನಮ್ಮನ್ನು ಪಕ್ಷಕ್ಕೆ ಕರೆತಂದವರು ಎಂದರು.

ABOUT THE AUTHOR

...view details