ಕರ್ನಾಟಕ

karnataka

ETV Bharat / city

ನನ್ನಿಂದ ಅನ್ಯಾಯವಾಗಿದ್ದರೆ ಕೇಳಬಹುದಿತ್ತು: ಮನೆ ಸುಟ್ಟು ಹಾಕುವ ಅಗತ್ಯವೇನಿತ್ತು: ’ಅಖಂಡ’ ಪ್ರಶ್ನೆ - ಮಾಜಿ ಸಂಪತ್​ ರಾಜ್​ ಬಂಧನ

ನಮ್ಮ ಕ್ಷೇತ್ರದ ಜನರನ್ನು ನನ್ನಿಂದ ದೂರ ಮಾಡಲೆಂದೇ ಈ ಗಲಭೆ ನಡೆಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಲ್ಲರೂ ನನ್ನ ನಂಬಿದ್ದಾರೆ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಹೇಳಿದರು.

Akandha shrinivas murthy
ಅಖಂಡ ಶ್ರೀನಿವಾಸಮೂರ್ತಿ

By

Published : Nov 17, 2020, 1:54 PM IST

ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್​​ಗೆ ನನ್ನಿಂದ ಏನಾದರೂ ಅನ್ಯಾಯವಾಗಿದ್ದರೆ ಕೇಳಬಹುದಿತ್ತು. ಅದರ ಬದಲಿಗೆ ನನ್ನ ಮನೆ ಸುಟ್ಟುಹಾಕುವ ಅಗತ್ಯ ಏನಿತ್ತು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಪೊಲೀಸ್, ಮಾಧ್ಯಮದವರಿಂದ ನ್ಯಾಯ ಸಿಕ್ಕಿದೆ. ಮನೆ ಸುಟ್ಟಾಗಿನಿಂದಲೂ ಮಾಧ್ಯಮಗಳು ಮಾಹಿತಿ ಬಿತ್ತರಿಸಿದ್ದವು. ಆದರೆ, ಸಂಪತ್ ರಾಜ್ ರಾತ್ರೋರಾತ್ರಿ ಓಡಿ ಹೋಗಲು ಕಾರಣವೇನು? ಘಟನೆ ನಡೆದು ಮೂರು ತಿಂಗಳು ಆರು ದಿನವಾಗಿದೆ. ಇವತ್ತು ಅವರನ್ನು ಬಂಧಿಸಲಾಗಿದೆ ಎಂದರು.

ನನ್ನಿಂದ ಏನಾದರೂ ತಪ್ಪಾಗಿದೆಯಾ? ತಪ್ಪಾಗಿದ್ದರೆ ಅವರು ನನ್ನನ್ನೇ ಕೇಳಬಹುದಿತ್ತು. ಆದರೆ ಮನೆ, ವಾಹನಗಳನ್ನು ಸುಟ್ಟು ಹಾಕಿದ್ದರು. ನಮ್ಮ ಸಮುದಾಯದ ಶ್ರೀಗಳು, ಸಿಎಂ ಭೇಟಿ ಮಾಡಿದ್ದರು. ಈಗ ಸರ್ಕಾರ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದೆ. ಶಾಸಕರಿಗೇ ಹೀಗಾದರೆ ಸಾಮಾನ್ಯ ಜನರ ಕಥೆಯೇನು? ಅವರು ಯಾರೇ ಆಗಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.

ನನ್ನ ಮನೆ ಸುಟ್ಟಿರುವುದು ಎಲ್ಲರ ಕಣ್ಣಿಗೂ ಕಾಣುವುದಿಲ್ಲವೇ? ನನಗೆ ದುಃಖ ಆಗಲ್ಲವೇ? ನಾನು ನಾಳೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರನ್ನೂ ಭೇಟಿ ಮಾಡುತ್ತೇನೆ. ಅವರಲ್ಲೂ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡುತ್ತೇನೆ ಎಂದರು.

ಡಿಕೆಶಿ ಭೇಟಿ ಮಾಡಿಲ್ಲ ಎಂಬ ವಿಚಾರ ಮಾತನಾಡಿ, ನಾನು ಎರಡು ಭಾರಿ ಅವರನ್ನ ಭೇಟಿ ಮಾಡಿದ್ದೇನೆ. ನಾಳೆಯೂ ಭೇಟಿ ಮಾಡುತ್ತೇನೆ. ಸಿದ್ದರಾಮಯ್ಯ, ಜಮೀರ್ ಅವರ ಜೊತೆ ಮಾತನಾಡುತ್ತೇನೆ. ಅವರು ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದ ಅವರು, ಜನರನ್ನು ದೂರ ಮಾಡುವುದಕ್ಕೆ ಕಾರ್ಪೋರೇಟರ್ಸ್ ಹೊರಟಿದ್ದರು. ಆದರೆ, ನಮ್ಮ ಕ್ಷೇತ್ರದಲ್ಲಿ ಎಲ್ಲರೂ ನನ್ನನ್ನ ನಂಬಿದ್ದಾರೆ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮ್ಮ ಜನರನ್ನೇ ದೂರ ಮಾಡಲು ಈ ಕೆಲಸ ಮಾಡಿದ್ದಾರೆ ಎಂದು ನೇರವಾಗಿಯೇ ಸಂಪತ್ ರಾಜ್ ವಿರುದ್ಧ ಅಖಂಡ ಆರೋಪ ಮಾಡಿದರು.

ABOUT THE AUTHOR

...view details