ಕರ್ನಾಟಕ

karnataka

ಸ್ವಾತಂತ್ರ್ಯ ದಿನ ಶಾಂತಿಯಿಂದ ಆಚರಿಸಬೇಕು, ಕಿಡಿಗೇಡಿ ಕೃತ್ಯಕ್ಕೆ ವಿಚಲಿತರಾಗಬೇಡಿ: ಡಿಕೆಶಿ

By

Published : Aug 14, 2022, 10:36 AM IST

ಟಿಪ್ಪು ಸುಲ್ತಾನ್ ಭಿತ್ತಿ ಚಿತ್ರಕ್ಕೆ ಕೆಲವರು ಶನಿವಾರ ರಾತ್ರಿ ಹಾನಿ ಮಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು:ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆ ನಿಮಿತ್ತ ಕಾಂಗ್ರೆಸ್ ಬೆಂಗಳೂರಿನ ಹಡ್ಸನ್ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿಚಿತ್ರ ಅಳವಡಿಸಿದ್ದರು. ಈ ಭಿತ್ತಿಚಿತ್ರಗಳ ಪೈಕಿ ಟಿಪ್ಪು ಸುಲ್ತಾನ್ ಚಿತ್ರಕ್ಕೆ ಯಾರೋ ಕಿಡಿಗೇಡಿಗಳು ಶನಿವಾರ ರಾತ್ರಿ ಹಾನಿ ಮಾಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಂಸದ ಡಿ ಕೆ ಸುರೇಶ್, ಮುಖಂಡರಾದ ವಿನಯ್ ಕಾರ್ತಿಕ್, ಹನುಮಂತರಾಯಪ್ಪ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದಿಂದ 3.50 ಕಿ.ಮೀ. ಉದ್ದದ ಬೃಹತ್ ರಾಷ್ಟ್ರಧ್ವಜ ಅನಾವರಣ ಮಾಡಲಿದ್ದಾರೆ. ಈ ಪ್ರಯುಕ್ತ ನಿನ್ನೆ ಸಂಜೆ ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿಚಿತ್ರಗಳನ್ನು ಮಾರ್ಗದಕ್ಕೂ ಸಿದ್ಧಪಡಿಸಿ ನಿಲ್ಲಿಸಲಾಗಿತ್ತು. ಅದರಲ್ಲಿ ಕೆಲ ಭಿತ್ತಿಚಿತ್ರಗಳನ್ನು ಹಾಳು ಮಾಡಲಾಗಿದೆ. ಶಿವಮೊಗ್ಗದಲ್ಲಿ ವೀರ ಸಾವರ್ಕರ್‌ ಫೋಟೋ ತೆಗೆಸಿದ್ದಕ್ಕೆ ಪ್ರತಿಯಾಗಿ ಟಿಪ್ಪು ಭಿತ್ತಿ ಚಿತ್ರ ತೆಗೆದು ಹಾಕಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಡಿಕೆಶಿ ಮಾಧ್ಯಮಗಳ ಜೊತೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ರಾಷ್ಟ್ರ ನಾಯಕ ಟಿಪ್ಪು ಸುಲ್ತಾನ್ ಕಟೌಟ್ ಹರಿದು ಹಾಕಿದ್ದಾರೆ. ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ಸಹ ಟಿಪ್ಪು ಸುಲ್ತಾನ್ ಅವರನ್ನು ಒಬ್ಬ ಸ್ವತಂತ್ರ ಹೋರಾಟಗಾರನಾಗಿಯೇ ತೋರಿಸಿದೆ. ಕಿಡಿಗೇಡಿಗಳಿಂದ ಈ ರೀತಿಯ ಕೃತ್ಯ ನಡೆದಿರುವುದು ಬಹಳ ಬೇಸರ ತಂದಿದೆ ಎಂದರು.

ಇದನ್ನೂ ಓದಿ:ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದೆಂದು ಹೇಳುವಷ್ಟು ಮೂರ್ಖರಲ್ಲ ಎಂದ ಡಿಕೆಶಿ

ABOUT THE AUTHOR

...view details