ಬೆಂಗಳೂರು:ಲಾಂಗ್ ಹಿಡಿದು ದರೋಡೆ ಮಾಡುವ ಪುಂಡರ ಸಂಖ್ಯೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಪುಂಡರ ಗುಂಪೊಂದು ಗನ್ ಹಿಡಿದು ಬೈಕ್ನಲ್ಲಿ ಶೋ ಕೊಟ್ಟಿದ್ದಾರೆ. ನಾಗರಿಕರೊಬ್ಬರು ಗನ್ ಹಿಡಿದು ಬೈಕ್ ರೈಡಿಂಗ್ ಮಾಡಿದ ಪುಂಡರ ಫೋಟೋ ಸೆರೆಹಿಡಿದು ಬೆಂಗಳೂರು ಸಿಟಿ ಪೊಲೀಸ್ ಪೇಜ್ಗೆ ಪೋಸ್ಟ್ ಮಾಡಿ ದೂರು ನೀಡಿದ್ದಾರೆ.
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹಾವಳಿ.. ಹಾಡಹಗಲೇ 'ಗನ್' ಹಿಡಿದು ಬೈಕ್ ರೈಡಿಂಗ್! - ಗನ್ ಹಿಡಿದು ಪುಂಡರ ಬೈಕ್ ರೈಡಿಂಗ್
ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಪುಂಡರ ಹಾವಳಿ- ಹಾಡಹಗಲೇ ಗನ್ ಹಿಡಿದು ಬೈಕ್ನಲ್ಲಿ ಶೋ - ಪೊಲೀಸರಿಗೆ ಆನ್ಲೈನ್ನಲ್ಲಿ ಬಂತು ದೂರು
ಗನ್ ಹಿಡಿದು ಪುಂಡರ ಬೈಕ್ ರೈಡಿಂಗ್
ಬನ್ನೇರುಘಟ್ಟ ರಸ್ತೆ ಮಾರ್ಬಲ್ ರೋಡ್ ಬಳಿ ಗನ್ ಹಿಡಿದು ಬೈಕ್ನಲ್ಲಿ ತೆರಳುತ್ತಿರುವುದಾಗಿ ಅಲ್ಕೇಶ್ ಕಲ್ಮ್ ಕರ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ಸಮಯ ಹಾಗೂ ಸ್ಥಳದ ಮಾಹಿತಿ ನೀಡಿ ಎಂದು ಆಡುಗೋಡಿ ಪೊಲೀಸರು ರಿಪೋಸ್ಟ್ ಮಾಡಿದ್ದಾರೆ. ಸದ್ಯ ಸಾರ್ವಜನಿಕವಾಗಿ ಗನ್ ಹಿಡಿದು ಓಡಾಡುತ್ತಿರುವ ಪುಂಡರನ್ನು ಹೆಡೆಮುರಿ ಕಟ್ಟಲು ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ನಟ ಸುಶಾಂತ್ ಸಿಂಗ್‌ಗೆ ಗಾಂಜಾ ನಶೆ ಏರಿಸಿದ್ದೇ ರಿಯಾ ಚಕ್ರವರ್ತಿ: ಎನ್ಸಿಬಿ ಚಾರ್ಜ್ಶೀಟ್ ಸಲ್ಲಿಕೆ