ಬೆಂಗಳೂರು: ಕಿಡಿಗೇಡಿಗಳು ಚರ್ಚ್ ಒಳಗೆ ನುಗ್ಗಿ ದಾಂಧಲೆ ಮಾಡಿ, ಅಲ್ಲಿದ್ದ ಹುಂಡಿ ಕಳ್ಳತನ ಮಾಡಿರುವ ಘಟನೆ ಕೆಂಗೇರಿ ಉಪನಗರದಲ್ಲಿರುವ ಚರ್ಚ್ನಲ್ಲಿ ನಡೆದಿದೆ.
ಬೆಂಗಳೂರಲ್ಲಿ ಚರ್ಚ್ ಒಳಗೆ ನುಗ್ಗಿ ದಾಂಧಲೆ: ಹುಂಡಿ ಎಗರಿಸಿದ ಕಿಡಿಗೇಡಿಗಳು! - attack on bengaluru church
ಕೆಂಗೇರಿ ಉಪನಗರದಲ್ಲಿರುವ ಚರ್ಚ್ನಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿ, ಹುಂಡಿ ಕಳವು ಮಾಡಿದ್ದಾರೆ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಲ್ಲಿ ಚರ್ಚ್ ಒಳಗೆ ನುಗ್ಗಿ ದಾಂದಲೆ
ಕಳೆದ ರಾತ್ರಿ ಕೆಂಗೇರಿ ಉಪನಗರದಲ್ಲಿರುವ ಚರ್ಚ್ಗೆ ನುಗ್ಗಿದ ಕಿಡಿಗೇಡಿಗಳು ಕಿಟಕಿ, ಬಾಗಿಲು, ಕುರ್ಚಿಗಳನ್ನು ಮುರಿದಿದ್ದಾರೆ. ನಂತರ ಅಲ್ಲಿದ್ದ ಕಾಣಿಕೆ ಹುಂಡಿಯನ್ನು ಎಗರಿಸಿ ಪರಾರಿಯಾಗಿದ್ದಾರೆ.
ಬೆಳಗ್ಗೆ ಚರ್ಚ್ ಫಾದರ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Jan 21, 2020, 2:51 PM IST