ಕರ್ನಾಟಕ

karnataka

ETV Bharat / city

ರ‍್ಯಾಂಪ್​​ ಮೇಲೆ ಮೋಹಕ ಬೆಡಗಿಯರ ಝಲಕ್​.. ಸುಂದರಿಯರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ ಕಿರೀಟ - ರ್ಯಾಂಪ್​ ಮೇಲೆ ಮೋಹಕ ಬೆಡಗಿಯರ ಝಲಕ್​

ಬೆಂಗಳೂರಿನಲ್ಲಿ ಮಿಸೆಸ್​ ಸೌತ್​ ಇಂಡಿಯಾ ಐ ಆ್ಯಮ್​ ಪವರ್​ಫುಲ್​ ಸ್ಪರ್ಧೆ ನಡೆಸಲಾಯಿತು. 70 ರೂಪದರ್ಶಿಯಲ್ಲಿ ಹೆಜ್ಜೆ ಹಾಕಿದರು.

ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದ ಸುಂದರಿಯರು
ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದ ಸುಂದರಿಯರು

By

Published : Jul 12, 2022, 10:44 PM IST

Updated : Jul 12, 2022, 11:01 PM IST

ಬೆಂಗಳೂರು:ನಗರದಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್​ಫುಲ್​ ಸ್ಪರ್ಧೆಯಲ್ಲಿ ಪ್ರಿಯಾಂಕ್​, ಸುವನ, ಸಿಂಧು, ಜನನಿ, ಬಬಿತಾ ಮಿಸೆಸ್ ಸೌತ್ ಇಂಡಿಯಾ ವಿಜೇತರಾಗಿ ಕಿರೀಟ ಧರಿಸಿದರು. ಇದಲ್ಲದೇ, ಇದೇ ಮೊದಲ ಬಾರಿಗೆ ಪರಿಚಯಿಸಲಾದ ಕರ್ವಿ ವಿಭಾಗದಲ್ಲಿ ಸುಚಿತ್ರ ವೇಣುಗೋಪಾಲ್, ವರ್ಷ, ಶ್ವೇತ ಪ್ರಶಸ್ತಿ ಗೆದ್ದರೆ, ಮಿಸ್ಟರ್ ವಿಭಾಗದಲ್ಲಿ ಸಂಜಯ್, ಅಭಿಷೇಕ್ ನಾಯರ್, ನವೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇನ್ನು ಮಿಸ್ ವಿಭಾಗದಲ್ಲಿ ಬನಶ್ರೀ ಸಕ್ರಿ, ಸನರ, ಪ್ರತಿಭಾ ತಮ್ಮ ಛಾಪು ಮೂಡಿಸಿದರು.

70 ರೂಪದರ್ಶಿಯರ ಮೋಹಕ ವಾಕ್:ಬೆಂಗಳೂರಿನಹೋಟೆಲ್ ಲಲಿತ್ ಅಶೋಕ್​ನಲ್ಲಿ ನಡೆದ 'ಮಿಸ್ ಹಾಗೂ ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್' ಫ್ಯಾಷನ್ ಶೋದಲ್ಲಿ ವಿವಿಧ ರಾಜ್ಯ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ 70 ರೂಪದರ್ಶಿಯರು ರ‍್ಯಾಂಪ್ ಮೇಲೆ ಹೆಜ್ಜೆಹಾಕಿದರು.

ಸುಂದರಿಯರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ ಕಿರೀಟ

ಗೌನ್ ಹಾಗೂ ಸೀರೆಯಲ್ಲಿ ಮಿಂಚಿದ ಮಿಸೆಸ್ ಹಾಗೂ ಮಿಸ್ ವಿಭಾಗದ ರೂಪದರ್ಶಿಯರಿಗೆ ಕಡಿಮೆ ಇಲ್ಲದಂತೆ ಮಿಸ್ಟರ್ ವಿಭಾಗದವರೂ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ಈ ಬಾರಿಯ ಫ್ಯಾಷನ್ ಷೋದ ವಿಶೇಷತೆಯಾಗಿತ್ತು.

ಇಂಟರ್​ನ್ಯಾಷಾಷನಲ್ ಬ್ಯುಸಿನೆಸ್ ಸ್ಕೂಲ್ ಆಫ್ ವಾಷಿಂಗ್ಟನ್ ಸಹಯೋಗದಲ್ಲಿ ನಂದಿನಿ ನಾಗರಾಜ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸೌಂದರ್ಯ ಸ್ಪರ್ಧೆ ಎಂದರೆ ತೆಳ್ಳಗೆ, ಬೆಳ್ಳಗೆ ಇರುವವರಿಗೆ ಮಾತ್ರ ಎನ್ನುವ ಮೂಢನಂಬಿಕೆಯನ್ನು ಕೈಬಿಡುವ ಉದ್ದೇಶದಿಂದ ಮಿಸೆಸ್ ಕರ್ವಿ ವಿಭಾಗವನ್ನು ಕೂಡ ಆಯೋಜಿಸಲಾಗಿತ್ತು.

ಮಿಸೆಸ್ ಸೌತ್ ಇಂಡಿಯಾ ವಿಭಾಗದಲ್ಲಿ 30, ಮಿಸ್ ವಿಭಾಗದಲ್ಲಿ 20, ಮಿಸ್ಟರ್ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದರು. ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು ಹೆಜ್ಜೆ ಹಾಕಿದರು. ಇಲ್ಲಿ ಗೆದ್ದ ಚಿಣ್ಣರು ಅಮೆರಿಕದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸಾಂಪ್ರದಾಯಿಕ ಸುತ್ತಿಗೆ ರೇಷ್ಮಾ ಸಿಂಗ್ ಡಿಸೈನರ್ ಆಗಿ ಕೆಲಸ ಮಾಡಿದ್ದರೆ, ಚಂದನ್ ಗೌಡ ಹಾಗೂ ಬಕ್ಕಾಶಾಲಿ ಗೌನ್ ರೌಂಡ್​ನ ಡಿಸೈನರ್ ಆಗಿದ್ದರು. ಸ್ವರ್ಣಮಂಗಲ್ ಜ್ಯುವೆಲ್ಲರಿ ಅವರ ಸಹಯೋಗವೂ ಇತ್ತು.

ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, "ಫ್ಯಾಷನ್ ಶೋ ಎಂದರೆ ಕೇವಲ ಸೌಂದರ್ಯ ಸ್ಪರ್ಧೆಯಲ್ಲ. ಇಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶವಿದೆ. ಮದುವೆಯಾದ ನಂತರ ಕೂಡ ತಮಗೆ ರ‍್ಯಾಂಪ್ ಮೇಲೆ ಹೆಜ್ಜೆಹಾಕುವ ಅವಕಾಶ ಸಿಕ್ಕಿದ್ದಕ್ಕೆ ಮಿಸೆಸ್ ವಿಭಾಗದ ಸ್ಪರ್ಧಿಗಳು ಸಂಭ್ರಮಿಸಿದ್ದಾರೆ" ಎಂದರು.

ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್‌ನಲ್ಲಿ ಗೆದ್ದ ಸ್ಪರ್ಧಿಗಳು ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಗೆದ್ದವರು ಸಿಂಗಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಓದಿ:ಗಾಳಿಪಟ 2 ಚಿತ್ರತಂಡದಿಂದ ಬರ್ತೀದೆ ಕಿಕ್ಕೇರಿಸುವ 'ಎಣ್ಣೆ ಸಾಂಗ್'

Last Updated : Jul 12, 2022, 11:01 PM IST

ABOUT THE AUTHOR

...view details