ಕರ್ನಾಟಕ

karnataka

ETV Bharat / city

ಆರ್.ಅಶೋಕ್ ಜೊತೆ ಯಾವುದೇ ಸಂಘರ್ಷ ನಡೆದಿಲ್ಲ: ಸಚಿವ ಅಶ್ವತ್ಥ್ ನಾರಾಯಣ

ನಮ್ಮ ಪ್ರತಿಷ್ಠೆಗಳನ್ನ ಬಿಡಲೇಬೇಕಾಗುತ್ತದೆ. ನಾವು ಒಟ್ಟಿಗೆ ಕೆಲಸ ಮಾಡಬೇಕು. ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಒಂದು ಪಕ್ಷದಲ್ಲಿ ಇರುವವರು ಪರಸ್ಪರ ಪ್ರೀತಿ, ಗೌರವ ಇರಬೇಕು. ವ್ಯತ್ಯಾಸಗಳು ಬರ್ತಾವೆ, ಹೋಗ್ತಾವೆ. ಅದನ್ನೇ ಹೆಚ್ಚಾಗಿ ಒತ್ತು ಕೊಡುವ ಪ್ರಶ್ನೆಯೇ ಇಲ್ಲ..

minitser-r-ashwath-narayana-on-revenue-minister-r-ashok
ಆರ್.ಅಶೋಕ್ ಜೊತೆ ಯಾವುದೇ ಸಂಘರ್ಷ ನಡೆದಿಲ್ಲ: ಸಚಿವ ಅಶ್ವತ್ಥ್ ನಾರಾಯಣ್

By

Published : Mar 18, 2022, 12:34 PM IST

ಬೆಂಗಳೂರು :ತಮ್ಮ ಹಾಗೂ ಸಚಿವ ಆರ್.ಅಶೋಕ್ ಮಧ್ಯೆ ಯಾವುದೇ ಸಂಘರ್ಷ ನಡೆದಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರ್. ಅಶೋಕ್ ನಡುವಿನ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜಸ್ಟ್ ಮಾತುಕತೆ ನಡೆದಿದೆ ಎಂದಿದ್ದಾರೆ.

ಮಾಗಡಿ, ರಾಮನಗರದಲ್ಲಿ ತಹಶೀಲ್ದಾರ್​ಗಳ ಬದಲಾವಣೆ ಕೋರಿಕೆ ಬಂದಿದೆ. ಆ ಪ್ರಕಾರದಲ್ಲಿ ಕಂದಾಯ ಸಚಿವರು ಪರಿಗಣಿಸಿ ನೋಡ್ತೀನಿ ಅಂತಾ ಹೇಳಿದರು. ಅದು ಅವರ ಇಲಾಖೆಗೆ ಬಿಟ್ಟಿದ್ದು. ಬೇರೆ ಯಾವ ಚರ್ಚೆ, ವಿವಾದ, ಮಾತು ನಡೆದಿಲ್ಲ ಎಂದು ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದರು.

ಸಚಿವ ಅಶ್ವತ್ಥ್ ನಾರಾಯಣ್

ಸಾಮಾನ್ಯವಾಗಿ ಆಯಾ ಇಲಾಖೆಯಲ್ಲಿರುವವರು ಇತಿಮಿತಿಯಲ್ಲಿ ಕೆಲಸ ಮಾಡ್ತಾರೆ. ನಮಗೆ ಕೆಲವೊಂದು ಬದಲಾವಣೆ ಮಾಡಲು ಒತ್ತಾಯ ಇರುತ್ತದೆ. ಸಂಬಂಧಿಸಿದ ಇಲಾಖೆಯಲ್ಲಿ ಪರಿಸ್ಥಿತಿ ನೋಡಿಕೊಂಡು ಅವಕಾಶ ಇದ್ದರೆ ಮಾಡುತ್ತಾರೆ. ನಮ್ಮದೇ ಆದ ಒತ್ತಾಯ ಇರುತ್ತದೆ. ಅದನ್ನು ಒಪ್ಪಿಕೊಳ್ಳಬೇಕು ಅಂತೇನಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ನಾವಿಬ್ಬರು ಒಂದು ಪಕ್ಷದಲ್ಲಿರುವವರು. ಸಹೋದರರ ರೀತಿ ಇರಬೇಕು. ಪ್ರೀತಿ ಇರಬೇಕು. ವ್ಯತ್ಯಾಸ ಬರುತ್ತದೆ. ಅದನ್ನು ಅಲ್ಲೇ ಬಿಡಬೇಕು. ನಾವೆಲ್ಲರೂ ಬಂದಿರೋದು ಜನರ ಪರವಾಗಿ. ನಮ್ಮ ಪ್ರತಿಷ್ಠೆಗಳನ್ನ ಹೆಚ್ಚಿಸಿಕೊಳ್ತಾ ಹೋದ್ರೆ ಯಾವುದೇ ಒಳ್ಳೆಯ ಉದ್ದೇಶಗಳಿಗೆ ಪೂರಕವಾಗಿರಲ್ಲ.

ನಮ್ಮ ಪ್ರತಿಷ್ಠೆಗಳನ್ನ ಬಿಡಲೇಬೇಕಾಗುತ್ತದೆ. ನಾವು ಒಟ್ಟಿಗೆ ಕೆಲಸ ಮಾಡಬೇಕು. ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಒಂದು ಪಕ್ಷದಲ್ಲಿ ಇರುವವರು ಪರಸ್ಪರ ಪ್ರೀತಿ, ಗೌರವ ಇರಬೇಕು. ವ್ಯತ್ಯಾಸಗಳು ಬರ್ತಾವೆ, ಹೋಗ್ತಾವೆ. ಅದನ್ನೇ ಹೆಚ್ಚಾಗಿ ಒತ್ತು ಕೊಡುವ ಪ್ರಶ್ನೆಯೇ ಇಲ್ಲ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:ಶೀಘ್ರದಲ್ಲೇ ಗುಲಾಂ ನಬೀ ಆಜಾದ್ ಸೇರಿ ಜಿ-23 ನಾಯಕರಿಂದ ಸೋನಿಯಾ, ರಾಹುಲ್ ಭೇಟಿ

ABOUT THE AUTHOR

...view details