ಕರ್ನಾಟಕ

karnataka

ETV Bharat / city

ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವಂತಾಗಿದೆ ಸಚಿವರ ಪರಿಸ್ಥಿತಿ! - Minister Jagadish Shettar

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ನಾಯಕರು ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ದರಿದ್ದೇವೆ ಎನ್ನುವ ಮೂಲಕ ಸಚಿವ ಕೆ.ಎಸ್‌.ಈಶ್ವರಪ್ಪ, ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಹಿರಿಯ ಸಚಿವ ಜಗದೀಶ್ ಶೆಟ್ಟರ್ ನಾಯಕತ್ವ ಬದಲಾವಣೆ ಮಾಡಿದರೂ ಒಪ್ಪಿಕೊಳ್ಳುವ ನಿಲುವು ವ್ಯಕ್ತಪಡಿದ್ದಾರೆ.

Bangalore
ನಾಯಕತ್ವ ಬದಲಾವಣೆ ಬಗ್ಗೆ ಸಚಿವರ ಅಭಿಪ್ರಾಯ

By

Published : Jun 16, 2021, 12:24 PM IST

ಬೆಂಗಳೂರು:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಪಕ್ಷನಿಷ್ಟ ಸಚಿವರು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುವ ಮೂಲಕ ಇಬ್ಬಗೆಯ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವಂತಿದೆ ಅವರ ಧೋರಣೆ.

ಮನೆ ಅಂದ ಮೇಲೆ ಸಣ್ಣಪುಟ್ಟ ಮನಸ್ತಾಪ ಸಹಜ. ನಮ್ಮ ಪಕ್ಷ ಒಂದು ಮನೆಯಿದ್ದಂತೆ, ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಿದ್ದಂತೆ. ಹಾಗಾಗಿ, ನಮ್ಮಲ್ಲೂ ಸಣ್ಣಪುಟ್ಟ ಅಸಮಾಧಾನ ವ್ಯಕ್ತವಾಗಿದೆ. ಅದನ್ನು ಆಲಿಸಲೆಂದೇ ಹೈಕಮಾಂಡ್​ನಿಂದ ಪ್ರತಿನಿಧಿ ಆಗಮಿಸುತ್ತಿದ್ದಾರೆ. ನಾಲ್ಕು ಗೋಡೆಗಳ ನಡುವೆ ಅಭಿಪ್ರಾಯ ವ್ಯಕ್ತಪಡಿಸಬೇಕು. ನಮ್ಮದು ಶಿಸ್ತಿನ ಪಕ್ಷ, ಆದರೂ ಶಿಸ್ತು ಉಲ್ಲಂಘಿಸಿ ಬಹಿರಂಗ ಹೇಳಿಕೆ ನೀಡಲಾಗಿದೆ. ಇದನ್ನು ಪರಿಹರಿಸಲೆಂದೇ ಅರುಣ್ ಸಿಂಗ್ ಬರುತ್ತಿದ್ದಾರೆ. ಹೈಕಮಾಂಡ್ ಎಲ್ಲ ಗೊಂದಲ ಬಗೆಹರಿಸಲಿದೆ.

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ನಾಯಕರು ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ದರಿದ್ದೇವೆ. ನಾನೊಬ್ಬ ಕಾರ್ಯಕರ್ತ, ಪಕ್ಷ ಹೇಳಿದ್ದನ್ನು ಕೇಳುವುದಷ್ಟೇ ನಮ್ಮ‌ ಕೆಲಸ ಎನ್ನುವ ಮೂಲಕ ಸಚಿವ ಕೆ.ಎಸ್‌.ಈಶ್ವರಪ್ಪ ನಾಯಕತ್ವ ಬದಲಾವಣೆ ಮಾಡಿದರೂ ಒಪ್ಪಿಕೊಳ್ಳುವ ನಿಲುವು ವ್ಯಕ್ತಪಡಿಸಿದ್ದಾರೆ.

ಇನ್ನು, ಡಿಸಿಎಂ ಅಶ್ವತ್ಥನಾರಾಯಣ ಕೂಡ ಇದೇ ಮಾತನ್ನು ಹೇಳಿದ್ದಾರೆ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ. ಇಲ್ಲಿ ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಪಕ್ಷದಲ್ಲಿ ಯಾರನ್ನೂ ಓಲೈಕೆ ಮಾಡಬಾರದು. ಇದೇ ಅಭಿಪ್ರಾಯವನ್ನು ನಾನು ಅರುಣ್ ಸಿಂಗ್ ಅವರ ಮುಂದೆ ಹೇಳುತ್ತೇನೆ ಎಂದರು.

ಹಿರಿಯ ಸಚಿವ ಜಗದೀಶ್ ಶೆಟ್ಟರ್ ಕೂಡ ಇದಕ್ಕೆ ಹೊರತಲ್ಲ. ಯಡಿಯೂರಪ್ಪ ನಮ್ಮ ನಾಯಕ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎನ್ನುತ್ತಲೇ ಹೈಕಮಾಂಡ್ ಎಲ್ಲ ಗೊಂದಲಕ್ಕೆ ತೆರೆ ಎಳೆಯಲಿದೆ. ಯಾವುದೇ ನಿರ್ಧಾರ ಕೈಗೊಂಡರೂ ನಾವು ಬದ್ದರಿರುತ್ತೇವೆ ಎಂದು ಅಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿದ್ದಾರೆ‌.

ಇದನ್ನೂ ಓದಿ:'ಬೆಲ್ಲದ್ ದೆಹಲಿ ಯಾತ್ರೆ' ಕುರಿತು ಸಿಎಂಗೆ ಮಾಹಿತಿ​ ನೀಡಿದ ಬೊಮ್ಮಾಯಿ

ABOUT THE AUTHOR

...view details