ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ತಮಗೆ ಇರುವ ನಂಟಿನ ಗುಟ್ಟನ್ನು ಸಚಿವ ವಿ. ಸೋಮಣ್ಣ ಅವರು ಹಾಸ್ಯಮಯವಾಗಿ ಬಿಚ್ಚಿಟ್ಟರು.
ಈಶ್ವರಪ್ಪ ಜೊತೆಗಿನ ನಂಟಿನ ಗುಟ್ಟನ್ನು ಬಿಚ್ಚಿಟ್ಟ ವಸತಿ ಸಚಿವ ವಿ.ಸೋಮಣ್ಣ - ವಸತಿ ಇಲಾಖೆಯ ನೂರು ದಿನಗಳ ಸಾಧನೆ ಕುರಿತ ಸುದ್ಧಿಗೋಷ್ಠಿ
ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ತಮಗೆ ಇರುವ ನಂಟಿನ ಗುಟ್ಟನ್ನು ಸಚಿವ ವಿ. ಸೋಮಣ್ಣನವರು ಹಾಸ್ಯವಾಗಿ ಬಿಚ್ಚಿಟ್ಟರು.

ವಿಕಾಸಸೌಧದಲ್ಲಿ ಇಂದು ವಸತಿ ಇಲಾಖೆಯ ನೂರು ದಿನಗಳ ಸಾಧನೆ ಕುರಿತು ಮಾಹಿತಿ ನೀಡಲು ಕರೆದಿದ್ದ ಮಾಧ್ಯಮಗೋಷ್ಟಿ ಆರಂಭಕ್ಕೂ ಮುನ್ನ ಮಾತನಾಡಿದ ಸೋಮಣ್ಣ, ನಮ್ಮ ಕಡೆ ಬರೋದಿಲ್ಲ ನೀವು, ವಿಧಾನಸೌಧ ನೋಡಿಕೊಂಡು ಹೋಗುತ್ತೀರಾ ಅಂತ ಮಾಧ್ಯಮದವರಿಗೆ ತಮಾಷೆ ಮಾಡಿದ್ರು. ಆಗ ವಿಧಾನಸೌಧದಲ್ಲಿ ನೀವು ಇರಬೇಕಿತ್ತೆಂದು ಮಾಧ್ಯಮದವರು ಕೇಳಿದಾಗ, ಈಶ್ವರಪ್ಪನವರ ಜೊತೆಗಿನ ನಂಟನ್ನು ಬಿಡಿಸಿ ಹೇಳಿದರು.
ಮೊದಲು ನನಗೆ ಈಗ ಈಶ್ವರಪ್ಪ ಇರುವ ರೂಮ್ ಕೊಟ್ಟಿದ್ದರು. ನಾನು ಪೂಜೆ ಮಾಡುವುದಕ್ಕೆ ಹೋಗುವ ಮುಂಚೆಯೇ, ಈಶ್ವರಪ್ಪ ಹೋಗಿ ಪೂಜೆ ಮಾಡಿಬಿಟ್ಟಿದ್ದರು. ಅಯ್ಯೋ ನಮ್ಮ ಸೋಮಣ್ಣ ಅಲ್ವಾ ಬಿಡಿ, ನಾನು ಹೇಳುತ್ತೇನೆ ಅಂತ ನನಗೆ ಕೊಟ್ಟಿದ್ದ ವಿಧಾನಸೌಧದ ಕೊಠಡಿಗೆ ಈಶ್ವರಪ್ಪ ಹೋದರು. ನಾನು ಹೋಗಲಿ ಬಿಡ್ರಪ್ಪಾ, ಅವರು ಈಶ್ವರ, ನಾನು ಬೀರೇಶ್ವರ ಅಂತ ಸುಮ್ಮನಾಗಿ ವಿಕಾಸಸೌಧಕ್ಕೆ ಬಂದೆ ಅಂತ ನಗುತ್ತಲೇ ಹೇಳಿದರು.