ಬೆಂಗಳೂರು:ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿಮಗೇ ನೀವೇ ಆತ್ಮಸ್ಥೈರ್ಯ ತುಂಬಿಕೊಳ್ಳಬೇಕೆ ವಿನಃ ದಯವಿಟ್ಟು ಆತ್ಮಹತ್ಯೆಗೆ ಮುಂದಾಗಬೇಡಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಳಿಸಿದ ಸಚಿವರು, ತೇರ್ಗಡೆ ಹೊಂದಿದ, ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಫೇಲ್ ಆದವರು ಮನನೋಯಿಸುಕೊಳ್ಳುವುದು, ಹತಾಶರಾಗುವುದು ಬೇಡ. ಯಾವುದೇ ಕಾರಣಕ್ಕೂ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡಬೇಡಿ. ಹಾಗೆಯೇ ಪೋಷಕರೂ ಕೂಡ ಮಕ್ಕಳನ್ನು ಅವಹೇಳನ ಮಾಡುವುದು, ಬಯ್ಯುವುದನ್ನು ಮಾಡಬೇಡಿ ಎಂದು ಕೇಳಿಕೊಂಡರು.