ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟ ಬಳಿಕ ಸಚಿವ ಸುರೇಶ್ ಕುಮಾರ್ ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಈ ನಡುವೆ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡುತ್ತಿದ್ದು, ಕೋವಿಡ್ ಕೃಪೆಯಿಂದ ಪುಸ್ತಕದ ಮರುಓದು ಪೂರೈಸಿದೆ ಎಂದು ಬರೆದುಕೊಂಡಿದ್ದಾರೆ.
ಈ ವಿಷಯಕ್ಕಾಗಿ ಕೋವಿಡ್ಗೆ ಥ್ಯಾಂಕ್ಸ್ ಹೇಳಿದ ಸಚಿವ ಸುರೇಶ್ ಕುಮಾರ್ - Suresh Kumar fb post
ಕೋವಿಡ್ ಕೃಪೆಯಿಂದ ಪುಸ್ತಕದ ಮರುಓದು ಪೂರೈಸಿದೆ ಎಂದು ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ.
![ಈ ವಿಷಯಕ್ಕಾಗಿ ಕೋವಿಡ್ಗೆ ಥ್ಯಾಂಕ್ಸ್ ಹೇಳಿದ ಸಚಿವ ಸುರೇಶ್ ಕುಮಾರ್ Minister Suresh Kumar fb post about A book](https://etvbharatimages.akamaized.net/etvbharat/prod-images/768-512-9085522-thumbnail-3x2-sow.jpg)
ಕೋವಿಡ್ ಕೃಪೆಯಿಂದ ಪುಸ್ತಕದ ಮರು ಓದು ಸಾಧ್ಯವಾಯಿತು: ಸಚಿವ ಸುರೇಶ್ ಕುಮಾರ್
ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವವರು ದೇವತೆಗಳು: ಕೋವಿಡ್ -19 ಕಾರಣ ಸಚಿವರು ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿದ್ದಾರೆ. ಈ ವೇಳೆ ಸಚಿವರ ಪತ್ನಿ ಸಾವಿತ್ರಿಯವರು ಪಿಪಿಇ ಕಿಟ್ ಧರಿಸಿ ಕೊಠಡಿಯನ್ನು ಸ್ವಚ್ಛಗೊಳಿಸಿದ ರೀತಿಯ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸುಮಾರು 35-40 ನಿಮಿಷಗಳ ಕಾಲ ಪಿಪಿಇ ಕಿಟ್ ಧರಿಸಿ ಸ್ವಚ್ಛಗೊಳಿಸಿದ ಪತ್ನಿ ಅನುಭವದ ಬಗ್ಗೆಯೂ ತಿಳಿಸಿದ್ದಾರೆ. ಜೊತೆಗೆ ಈ ಪಿಪಿಇ ಕಿಟ್ನ್ನು ಆರೆಂಟು ಗಂಟೆಗಳ ಕಾಲ ಧರಿಸಿ ಕೆಲಸ ಮಾಡುವ ವೈದ್ಯರು-ದಾದಿಯರು ದೇವತೆಗಳೇ ಸರಿ ಎಂದಿದ್ದಾರೆ.