ಕರ್ನಾಟಕ

karnataka

ETV Bharat / city

ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಲಿ: ಸಚಿವ ಸುನಿಲ್ ಕುಮಾರ್ - ಸಚಿವ ಸುನಿಲ್ ಕುಮಾರ್ ಹೇಳಿಕೆ

ಇಂದಿರಾ ಕ್ಯಾಂಟಿನ್ ಹೆಸರು ಬದಲಿಸುವ ವಿಚಾರವಾಗಿ ಜನರೇ ನಿರ್ಧಾರ ಮಾಡಲಿ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

minister-sunil-kumar-reaction-on-changing-name-of-indira-canteen
minister-sunil-kumar-reaction-on-changing-name-of-indira-canteen

By

Published : Aug 13, 2021, 1:18 PM IST

ಬೆಂಗಳೂರು:ಇಂದಿರಾ ಕ್ಯಾಂಟಿನ್ ಹೆಸರೇ ಇರಬೇಕಾ ಅಥವಾ ಅನ್ನಪೂರ್ಣೇಶ್ವರಿ ಹೆಸರು ಇಡಬೇಕಾ ಎಂಬ ಕುರಿತು ಜನರ ಅಭಿಪ್ರಾಯ ಸಂಗ್ರಹ ಆಗಲಿ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಉಚಿತವಾದ ಅನ್ನ ಸ್ವೀಕರಿಸುವ ಜನರೇ ಈ ಬಗ್ಗೆ ನಿರ್ಧಾರ ಮಾಡಲಿ. ಯಾವ ಹೆಸರಿಟ್ಟರೆ ಉಚಿತ ಅನ್ನ ಆಹಾರ ಸ್ವೀಕರಿಸಲು ಒಳ್ಳೆಯದು ಅನ್ನೋದರ ಜನಾಭಿಪ್ರಾಯ ಸಂಗ್ರಹ ಆಗಲಿ ಎಂದು ತಿಳಿಸಿದರು.

ಕಾಂಗ್ರೆಸ್ ನಮಗೆ ಸಂಸ್ಕೃತಿ ಕಲಿಸಿಕೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಸಂಸ್ಕೃತಿ ಏನು ಅನ್ನೋದು ನಮಗೆಲ್ಲ ಗೊತ್ತಿದೆ. ಹಿಂದೆ‌ ವಾಜಪೇಯಿ ಚತುಷ್ಪಥ ರಸ್ತೆ ನಿರ್ಮಾಣ ಆದಾಗ ಇದೇ ಕಾಂಗ್ರೆಸ್ ದೇಶಾದ್ಯಂತ ಹೆಸರು ಬದಲಾಯಿಸಲು ಹೊರಟಿದ್ದರು. ವಾಜಪೇಯಿ ಚತುಷ್ಪಥ ರಸ್ತೆಯ ಬೋರ್ಡ್ ಬದಲಾಯಿಸುವುದಕ್ಕಾಗಿಯೇ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದರು. ಹೀಗಾಗಿ ಅವರಿಂದ ನಾವೇನು ಕಲಿಬೇಕಾಗಿಲ್ಲ. ಆದರೆ ಕ್ಯಾಂಟಿನ್​ಗೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹ ಆಗಲಿ ಎಂದರು.

ABOUT THE AUTHOR

...view details