ಬೆಂಗಳೂರು: ಒಮಿಕ್ರಾನ್ ಕುರಿತು ಬೇರೆ ರಾಜ್ಯದ ವರದಿ ಬಂದಿದ್ದು, ನಮ್ಮ ರಾಜ್ಯದಲ್ಲಿ ಸದ್ಯ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಸೋಂಕಿತ ಸಂಪರ್ಕಿತರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸಮಸ್ಯೆ ತೀವ್ರತೆ ಕಂಡು ಬಂದಿಲ್ಲ. ಅವರೆಲ್ಲರೂ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ಕೋಲಾರ ಪ್ರವಾಸಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಬೌರಿಂಗ್ ಆಸ್ಪತ್ರೆಯ ನಿರ್ದೇಶಕರೊಂದಿಗೆ ಸಂಪರ್ಕದಲ್ಲಿದ್ದು, ಅವರ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಎಲ್ಲ ಸಂಪರ್ಕಿತರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆ ಪಡೆದವರಲ್ಲಿ ರೋಗದ ತೀವ್ರತೆ ಇರೋಲ್ಲ ಅನ್ನೋದಕ್ಕೆ ಇದೇ ಉತ್ತಮ ಉದಾಹರಣೆ. ಕೇವಲ ಒಂದು ಡೋಸ್ ಲಸಿಕೆ ಪಡೆದರೆ ರೋಗ ನಿರೋಧಕ ಶಕ್ತಿ ಬರೋದಿಲ್ಲ, ಎರಡು ಡೋಸ್ ತೆಗೆದುಕೊಂಡಾಗ ಮಾತ್ರ ಸಂಪೂರ್ಣ ವ್ಯಾಕ್ಸಿನೇಷನ್ ಆಗುವುದು ಎಂದು ಸಚಿವರು ಹೇಳಿದರು.
ಒಮಿಕ್ರಾನ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ:
ಒಮಿಕ್ರಾನ್ ಕುರಿತು ಕೇಂದ್ರದಿಂದ ಹೆಚ್ಚುವರಿ ನಿರ್ದೇಶನ ನೀಡಲಾಗಿದೆಯೇ ಎಂಬ ಕುರಿತು ಮಾತಾಡಿದ ಸಚಿವರು, ಒಮಿಕ್ರಾನ್ಗೆ ದೊಡ್ಡ ವ್ಯಾಖ್ಯಾನ ಕೊಡುವಂತಹ/ಆತಂಕಪಡುವ ಅಗತ್ಯವಿಲ್ಲ. ಯಾಕೆಂದರೆ ಪರಿಣಾಮಕಾರಿಯಾಗಿದ್ದ ಡೆಲ್ಟಾ ಸೋಂಕನ್ನು ಎದುರಿಸಿದ್ದೇವೆ. ಡೆಲ್ಟಾ ರೂಪಾಂತರಿಗೆ ಹೋಲಿಸಿದರೆ ಒಮಿಕ್ರಾನ್ ಹರಡುವಿಕೆಯಲ್ಲಿ ಮುಂದಿದೆ ಅನ್ನೋದು ಬಿಟ್ಟರೆ ತೀವ್ರತೆ ಎಲ್ಲೂ ನೋಡಿಲ್ಲ. ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾದಲ್ಲಿ ಗಮನಿಸಿದಾಗ ಒಮಿಕ್ರಾನ್ ತೀವ್ರತೆ ಏನೂ ಇಲ್ಲ. ಇದರ ಲಕ್ಷಣಗಳು ಮೃದುವಾಗಿದೆ. ಹೀಗಾಗಿ ಆತಂಕ ಬೇಡ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದರು.
ವಿಮಾನ ಹಾರಾಟಕ್ಕೆ ನಿರ್ಬಂಧ: