ಬೆಂಗಳೂರು:ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಸಿಲುಕಿಕೊಂಡ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ರೋಗಿಗಳಿಗೆ ರಕ್ತದ ಕೊರತೆ ಕೂಡಾ ಉಂಟಾಗಿದೆ ಎಂದು ಬ್ಲಡ್ ಬ್ಯಾಂಕಿನವರೇ ಅಧಿಕೃತವಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಕಾರ್ಯಪ್ರವೃತ್ತವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ರಕ್ತದಾನಿಗಳಿಗೆ ಪಾಸ್ ವ್ಯವಸ್ಥೆ ಮಾಡಲು ಆದೇಶಿಸಲಾಗಿದೆ... ಸಚಿವ ಡಾ. ಸುಧಾಕರ್ - ರಕ್ತದಾನಿಗಳಿಗೆ ಪಾಸ್ ವ್ಯವಸ್ಥೆಗೆ ಆದೇಶಿಸಲಾಗಿದೆ ಎಂದ ಸಚಿವರು
ರಕ್ತದ ಅವಶ್ಯಕತೆ ಇರುವವರು ಲಾಕ್ಡೌನ್ನಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರಕ್ತದಾನ ಶಿಬಿರ ನಡೆಯದೆ ಬ್ಲಡ್ಬ್ಯಾಂಕಿನಲ್ಲಿ ರಕ್ತ ಕೂಡಾ ದೊರೆಯುತ್ತಿಲ್ಲ. ಈ ಕಾರಣದಿಂದ ರಕ್ತದಾನಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ರಕ್ತದ ಸಮಸ್ಯೆ ಎದುರಿಸುತ್ತಿರುವವರಿಗೆ ರಕ್ತ ಸಿಗದೆ ಇರುವುದು ಬಹಳ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದ್ದು, ರಕ್ತದಾನ ಮಾಡುವ ದಾನಿಗಳ ಸಂಚಾರಕ್ಕೆ ಪಾಸ್ ವ್ಯವಸ್ಥೆ ಮಾಡುವತ್ತ ಕೂಡಾ ಗಮನ ಹರಿಸಿದೆ. ಲಾಕ್ಡೌನ್ ಇರುವ ಕಾರಣ ರಕ್ತದಾನ ಶಿಬಿರ ನಡೆಯುತ್ತಿಲ್ಲ. ರಕ್ತದಾನಿಗಳು ಕೂಡಾ ಹೊರಬರಲು ಹೆದರುತ್ತಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ರಕ್ತದಾನ ಮಾಡುವ ಇಚ್ಛೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡಲು ಆದೇಶಿಸಲಾಗಿದೆ. ರಕ್ತದಾನಿಗಳು ಇನ್ಮುಂದೆ ಪಾಸ್ ಪಡೆದು ಅವಶ್ಯಕತೆ ಇರುವ ಆಸ್ಪತ್ರೆಗಳಿಗೆ ಬಂದು ರಕ್ತ ನೀಡಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.