ಕರ್ನಾಟಕ

karnataka

ETV Bharat / city

10 ನಿಮಿಷದಲ್ಲಿ ವರದಿ ಪಡೆಯುವ ರ್ಯಾಪಿಡ್ ಆಂಟಿಜೆನ್ ಟೆಸ್ಟ್​ಗೆ ಸಚಿವ ಸುಧಾಕರ್ ಚಾಲನೆ.. - ರ್ಯಾಪಿಡ್ ಆಂಟಿಜೆನ್ ಟೆಸ್ಟ್​ಗೆ ಚಾಲನೆ

ಪ್ರತಿ ಮನೆಗೆ ಭೇಟಿ ನೀಡುವಾಗ ಮನೆಯಲ್ಲಿ 60 ವರ್ಷ ಮೇಲ್ಪಟ್ಟವರಿದ್ರೆ, ಅವರಿಗೆ ಬಿಪಿ, ಶುಗರ್ ಸೇರಿ ಬೇರೆ ಅನಾರೋಗ್ಯ ಸಮಸ್ಯೆ ಇದ್ಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕೆಂದು ಸಚಿವರು ತಿಳಿಸಿದರು..

Minister Sudhakar
ಸಚಿವ ಸುಧಾಕರ್

By

Published : Jul 12, 2020, 2:26 PM IST

ಬೆಂಗಳೂರು :ಯಲಹಂಕದಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್​ಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಚಾಲನೆ ನೀಡಿದರು.

ರ್ಯಾಪಿಡ್ ಆಂಟಿಜೆನ್ ಟೆಸ್ಟ್​ಗೆ ಚಾಲನೆ ನೀಡಿದ ಡಾ.ಸುಧಾಕರ್​

ಈ ಪರೀಕ್ಷೆಯಿಂದ ಕೇವಲ 10 ನಿಮಿಷದಲ್ಲಿ ವರದಿ ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಆಧುನಿಕ ಪ್ರಯೋಗಾಲಯದ ಅವಶ್ಯಕತೆ ಇರೋದಿಲ್ಲ. ‌ ಹೀಗಾಗಿ, ಜನರು ತಮ್ಮ ಕೊರೊನಾ ರಿಪೋರ್ಟ್ ಬರೋವರೆಗೆ ಕಾಯುವ ಅವಶ್ಯಕತೆ ಇರೋದಿಲ್ಲ.

ಇನ್ನು, ಇದೇ ವೇಳೆ ಯಲಹಂಕ ವಾರ್ಡ್​ನಲ್ಲಿ ಬೂತ್ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್​ಗೆ ಚಾಲನೆ ನೀಡಿದರು. ಟಾಸ್ಕ್‌ಫೋರ್ಸ್ ಸದಸ್ಯರಿಗೆ ಕೋವಿಡ್ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಕೆಲವು ಉಪಯುಕ್ತ ಮಾಹಿತಿ ನೀಡಿದರು.‌ ಪ್ರತಿ ಮನೆಗೆ ಭೇಟಿ ನೀಡುವಾಗ ಮನೆಯಲ್ಲಿ 60 ವರ್ಷ ಮೇಲ್ಪಟ್ಟವರಿದ್ರೆ, ಅವರಿಗೆ ಬಿಪಿ, ಶುಗರ್ ಸೇರಿ ಬೇರೆ ಅನಾರೋಗ್ಯ ಸಮಸ್ಯೆ ಇದ್ಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭ ಸಚಿವರಿಗೆ ಯಲಹಂಕದ ಶಾಸಕ ಎಸ್ ಆರ್ ವಿಶ್ವನಾಥ್ ಸಾಥ್ ನೀಡಿದರು.

ಲಸಿಕೆ ಸಿಗುವವರೆಗೆ ವೈರಾಣು ವಿರುದ್ಧ ದೂರ ಇರಬೇಕು. ಕೊರೊನಾಗೆ ಭಯಪಡುವ ಅವಶ್ಯಕತೆ ಇಲ್ಲ. ಆದರೆ, ಮುನ್ನೆಚ್ಚರಿಕೆ ಬಹಳ ಅಗತ್ಯವಿದೆ. ಇದರ ಹರಡುವಿಕೆ ಪ್ರಮಾಣ ಹೆಚ್ಚಿದ್ದು, ಜಾಗೃತಿ ಅಗತ್ಯ ಎಂದು ಸಚಿವರು ತಿಳಿ ಹೇಳಿದರು.

ABOUT THE AUTHOR

...view details