ಬೆಂಗಳೂರು:ಗುರುವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಮಕ್ಕಳ ಜೊತೆ ಸಚಿವರು ಕ್ರಿಕೆಟ್ ಆಡಿದರು.
ಮಳೆ ಅವಾಂತರ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದ ಸಭೆಗೆ ಸಚಿವ ಆರ್.ಅಶೋಕ್ ಗೈರಾಗಿದ್ದರು. ಸಭೆಗೆ ಗೈರಾದ ಸಚಿವ ಆರ್.ಅಶೋಕ್ ಪದ್ಮನಾಭನಗರದಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಟದಲ್ಲಿ ತೊಡಗಿದ್ದರು ಎಂಬ ಮಾತುಗಳು ಕೇಳಿಬಂದಿವೆ.