ಬೆಂಗಳೂರು :ದಿಲ್ಲಿಯಲ್ಲಿ ಹೇಗೆ ಕಾಂಗ್ರೆಸ್ ಹಿರಿಯ ಮುಖಂಡರ ಜಿ-23 ಪ್ರತ್ಯೇಕ ಬಣ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕೆ-23 ಬಣಕ್ಕೆ ನಟಿ ರಮ್ಯ ಮುಹೂರ್ತ ಫಿಕ್ಸ್ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರುಗಳ ಮಧ್ಯೆದ ಟ್ವಿಟರ್ ಬಗ್ಗೆವಿಧಾನಸೌಧದಲ್ಲಿಮಾತನಾಡಿದ ಅವರು, ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಹೊಂದಾಣಿಕೆ ಇಲ್ಲ. 224 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಆಗಲೇ ಟವೆಲ್ ಹಾಕಲು ಶುರು ಮಾಡಿದ್ದಾರೆ. ಆ ಟವೆಲ್ ಹಾಕಲು ಹೊರಟಿರುವುದರಿಂದಲೇ ಜಗಳ ಶುರುವಾಗಿದೆ. ಒಂದು ಕಡೆ ಜಮೀರ್ ಬಣ, ಇನ್ನೊಂದು ಕಡೆ ರಮ್ಯಾ ಎಂದು ಟೀಕಿಸಿದರು.
ದಿಲ್ಲಿಯಲ್ಲಿ ಕಾಂಗ್ರೆಸ್ನಲ್ಲಿ ಜಿ-23 ಭಿನ್ನಮತೀಯರ ಗ್ಯಾಂಗ್ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕೆ-23 ಭಿನ್ನಮತೀಯರ ಗ್ಯಾಂಗ್ ಪ್ರಾರಂಭವಾಗುತ್ತಿದೆ. ಅದಕ್ಕೆ ಕುಮಾರಿ ರಮ್ಯಾ ಮುಹೂರ್ತ ಇಡಲಿದ್ದಾರೆ. ರಮ್ಯಾ, ಎಂ.ಬಿ.ಪಾಟೀಲ್ ಪರ ಒಂದು ಟೀಂ, ಡಿಕೆಶಿ ನಲಪಾಡ್ ಪರ ಮತ್ತೊಂದು ಟೀಂ ಆಗಿದೆ. ಕಾಂಗ್ರೆಸ್‌ನ ಗುಂಪುಗಳ ಬಯಲಾಟ ಇದು. ಆ ಗುಂಪುಗಳ ಬಯಲಾಟ ಈಗ ಬೀದಿಗೆ ಬಂದಿದೆ ಎಂದರು.