ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಕಾಯ್ದೆ 2013ರಂತೆ ಪರಿಹಾರ ನೀಡಲು ಚರ್ಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭೂ ಸ್ವಾಧೀನ ಮತ್ತು ಪರಿಹಾರ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಕುರಿತಾದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಸಚಿವರು, ಶೀಘ್ರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಭೂ ಸ್ವಾದೀನ ಪ್ರಕ್ರಿಯೆ ತುಂಬಾ ನಿಧಾನ ಆಗ್ತಿದೆ. ಅದನ್ನು ಚುರುಕುಗೊಳಿಸಲು ಚರ್ಚೆ ಮಾಡಿದ್ದೇವೆ. ಸಿಎಂ ಜೊತೆಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ. 16 ಸಾವಿರ ಎಕರೆ ಈಗ ಭೂ ಸ್ವಾಧೀನ ಆಗಿದೆ. 35 ಸಾವಿರ ಎಕರೆ ಬಾಕಿ ಇದೆ. ಪರಿಹಾರ ಹಣ ಒಂದೊಂದು ತಾಲೂಕಿನಲ್ಲಿ ಒಂದೊಂದು ರೀತಿ ಇದೆ. ಇದೂ ಕೂಡ ಸಮಸ್ಯೆ ಆಗಿದೆ. ಉಳಿದಂತೆ ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರ 524ಕ್ಕೆ ಏರಿಕೆ ಆಗಿರುವುದರಿಂದ 75 ಸಾವಿರ ಎಕರೆ ಮುಳಗಡೆ ಮತ್ತು ಪುನರ್ವಸತಿಗೆ ಬೇಕು. ಈ ಭೂಮಿಯನ್ನು ಸ್ವಾಧೀನ ಮಾಡಲಾಗಿದೆ ಎಂದು ಹೇಳಿದರು.