ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪಕ್ಷಕ್ಕೂ, ನಮಗೂ ನೋವು ತಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಖಾ ಕದಿರೇಶ್ ಅವರ ಪತಿ ಕದಿರೇಶ್ರನ್ನು ಕೊಲೆ ಮಾಡಿದವರೇ ಜೈಲಿನಿಂದ ಬಿಡುಗಡೆಯಾದ ನಂತರ ರೇಖಾ ಅವರನ್ನೂ ಕೊಲೆ ಮಾಡಿರುವ ಅನುಮಾನವಿದೆ. ಇದು ಅಮಾನವೀಯ. ಕೊಲೆ ಹಿಂದೆ ಕುಟುಂಬದವರ ಕೈವಾಡ ಇದೆಯೋ, ಇಲ್ಲವೋ ಅಂತ ಗೊತ್ತಿಲ್ಲ. ಜೈಲಿಂದ ಬಿಡುಗಡೆಯಾದವರು ಕೊಲೆ ಮಾಡಿರಬಹುದು ಅಂತ ಹೇಳಲಾಗ್ತಿದೆ.