ಬೆಂಗಳೂರು: ಶೀಘ್ರದಲ್ಲೇ ಅನುಷ್ಠಾನ ಆಗಲಿರುವ ಜಿಲ್ಲೆಗೊಂದು ಗೋಶಾಲೆ ಮತ್ತು ರಾಜ್ಯದಲ್ಲಿರುವ ಖಾಸಗಿ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸಲು ಹಾಗೂ ಪಶುಪಾಲನೆಯಲ್ಲಿ ತೊಡಗಿದವರ ಆದಾಯ ಹೆಚ್ಚಿಸಲು ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅಧ್ಯಯನ ಪ್ರವಾಸಕ್ಕೆ ತೆರಳಲಿದ್ದಾರೆ.
ವಾರಾಣಸಿಯಲ್ಲಿನ ಅತ್ಯಾಧುನಿಕ ಬಯೋಗ್ಯಾಸ್ ಘಟಕ ಹಾಗೂ ಗೋಶಾಲೆಗಳಿಗೆ ಸಚಿವರು ಭೇಟಿ ನೀಡಲಿದ್ದು, ಅಲ್ಲಿನ ಅಧಿಕಾರಿಗಳು ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲಿದ್ದಾರೆ. ಅದರಂತೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ.