ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಹಾಗೂ ರೀಲರ್ಸ್ಗಳಿಗೆ ರಾಜ್ಯ ಸರ್ಕಾರ 50 ಕೋಟಿ ಹಣ ಬಿಡುಗಡೆ ಮಾಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ರೇಷ್ಮೆ ಮತ್ತು ತೋಟಗಾರಿಕಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದನೆ: ಸಿಎಂಗೆ ಸಚಿವ ನಾರಾಯಣಗೌಡ ಅಭಿನಂದನೆ
ರಾಜ್ಯದ ರೇಷ್ಮೆ ಬೆಳೆಗಾರರಿಗೆ ಹಾಗೂ ರೀಲರ್ಸ್ಗಳಿಗೆ ರಾಜ್ಯ ಸರ್ಕಾರ 50 ಕೋಟಿ ಹಣ ಬಿಡುಗಡೆ ಮಾಡಿದ್ದು, ತಮ್ಮ ಮನವಿಗೆ ಸ್ಪಂದಿಸಿದ ಸಿಎಂ ಬಿಎಸ್ವೈಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ರೇಷ್ಮೆ ಮತ್ತು ತೋಟಗಾರಿಕಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
ವಾರದ ಹಿಂದಷ್ಟೇ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ಜೊತೆ ಸಭೆ ನಡೆಸಿದ್ದೆ. ಸಭೆಯಲ್ಲಿ ರೀಲರ್ಸ್, ಅಡಮಾನ ಸಾಲ ಏರಿಕೆ ಹಾಗೂ ರೇಷ್ಮೆ ನೂಲು ಖರೀದಿ ಮಾಡುವ ಬಗ್ಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದೆ. ಪರಿಣಾಮ ರೇಷ್ಮೆ ಅಡಮಾನ ಸಾಲವನ್ನ ಒಂದು ಲಕ್ಷ ರೂ.ನಿಂದ ಎರಡು ಲಕ್ಷ ರೂ.ಗೆ ಏರಿಕೆ ಮಾಡಲಾಗಿದ್ದು, ಇದರ ಜೊತೆಗೆ ನೂಲು ಖರೀದಿಯ ಬೇಡಿಕೆಯನ್ನ ಈಡೇರಿಸಲಾಗಿದೆ. ರೇಷ್ಮೆ ನೂಲು ಖರೀದಿಗಾಗಿ ರಾಜ್ಯ ಸರ್ಕಾರ 10 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಪ್ರತಿ ರೀಲರ್ನಿಂದ 20 ಕೆಜಿ ನೂಲು ಖರೀದಿಗೆ ತೀರ್ಮಾನಿಸಲಾಗಿದೆ ಎಂದರು.
2019ರ ಏಪ್ರಿಲ್ 1ರಿಂದ ಈವರೆಗೆ ಯಾವ ರೀಲರ್ಸ್, ರೇಷ್ಮೆ ಗೂಡು ಖರೀದಿ ಮತ್ತು ರೇಷ್ಮೆ ಮಾರಾಟದ ವಹಿವಾಟನ್ನ ಕೆಎಸ್ಎಂಬಿ ಸಂಸ್ಥೆ ಹಾಗೂ ಓಪನ್ ಮಾರ್ಕೆಟ್ನಲ್ಲಿ ಮಾಡಿರುವವರಿಂದ ರೇಷ್ಮೆ ಖರೀದಿಗೆ ತೀರ್ಮಾನಿಲಾಗಿದೆ. ನಮ್ಮ ಮನವಿಗೆ ಸ್ಪಂದಿಸಿರುವ ಸಿಎಂ ಬಿಎಸ್ವೈಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ರು.