ಕರ್ನಾಟಕ

karnataka

ETV Bharat / city

ಅಂತರಿಕ್ಷ-ರಕ್ಷಣಾ ವಲಯದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ ಮಾಡಿ : ಜಾಗತಿಕ ಉದ್ಯಮಿಗಳಿಗೆ ಸಚಿವ ನಿರಾಣಿ ಆಹ್ವಾನ - ಜಾಗತಿಕ ಉದ್ಯಮಿಗಳಿಗೆ ಮುರುಗೇಶ್ ನಿರಾಣಿ ಆಹ್ವಾನ

ಕರ್ನಾಟಕದಲ್ಲಿ ‌ ಸುಮಾರು 2000 ಎಸ್‌ಎಂಇಗಳ ಪ್ರಬಲ ನೆಲೆಯನ್ನು ಹೊಂದಿದೆ. ಇದು ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ಉಪ-ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತದೆ. ಈ ವಲಯಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟ ‌ಪರಿಣಾಮ, ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ‌ವಿಸ್ತರಣೆಯನ್ನು ಮತ್ತಷ್ಟು ಹೆಚ್ಚಿಸಲು ‌ಅನುಕೂಲವಾಗಿದೆ. ಪರಿಣಾಮ ಹೆಚ್ಚು ಉದ್ದಿಮೆದಾರರಿಗೆ ‌ನಮ್ಮ ರಾಜ್ಯದ ಕಡೆ ಆಕರ್ಷಿತವಾಗಿದೆ ಎಂದು ನಿರಾಣಿ ಅವರು ಪ್ರಶಂಸಿದರು..

minister Murugesh Nirani invites Foreign investors for FDI
ಮುರುಗೇಶ್ ನಿರಾಣಿ

By

Published : Oct 17, 2021, 8:11 PM IST

ಬೆಂಗಳೂರು/ದುಬೈ: ಕರ್ನಾಟಕದಲ್ಲಿ ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ವಿಫುಲ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಈ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ (ಎಫ್​ಡಿಐ) ಮಾಡಲು ಉದ್ಯಮೆದಾರರಿಗೆ ರಾಜ್ಯ ಸರ್ಕಾರದ ಪರವಾಗಿ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ‌ಮುರುಗೇಶ್ ಆರ್ ನಿರಾಣಿ ಮನವಿ ಮಾಡಿದ್ದಾರೆ.

ವಿಶ್ವ ದುಬೈ ಎಕ್ಸ್ ಪೋ-2020ನಲ್ಲಿ "ಕರ್ನಾಟಕದಲ್ಲಿ ಅಂತರಿಕ್ಷ, ರಕ್ಷಣೆ ಹಾಗೂ ವೈಮಾನಿಕ ವಲಯದಲ್ಲಿರುವ ಅವಕಾಶಗಳು ಕುರಿತ‌‌ ವಿಚಾರ ಸಂಕಿರಣದಲ್ಲಿ‌ ಮಾತನಾಡಿದ ಅವರು, ಈ ವಲಯದಲ್ಲಿ ರಾಜ್ಯವು ಸಾಧಿಸಿರುವ 'ಪ್ರಗತಿಯ ಚಿತ್ರಣವನ್ನು' ತೆರೆದಿಟ್ಟರು.

ಈ ಕ್ಷೇತ್ರಗಳಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯ ಹೊಂದಿದೆ. "ಕರ್ನಾಟಕವು ಭಾರತದ ಅತಿದೊಡ್ಡ ಅಂತರಿಕ್ಷ ‌ಕ್ಲಸ್ಟರ್ ಆಗಿರುವುದಲ್ಲದೆ, ಭಾರತದಲ್ಲಿ ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2ನೇ ಅತಿದೊಡ್ಡ ಉತ್ಪಾದನಾ ‌ರಾಜ್ಯವಾಗಿದೆ ಎಂದು ಹೇಳಿದರು.

ವಿಶ್ವ ದುಬೈ ಎಕ್ಸ್‌ಪೋ-2020..

ಭಾರತದಲ್ಲಿ ಸುಮಾರು ಶೇ.60ರಷ್ಟು ಯಂತ್ರೋಪಕರಣಗಳನ್ನು ಉತ್ಪಾದಿಸಲಾಗುತ್ತದೆ. ನಮ್ಮ ರಾಜ್ಯವು ದೇಶದ 2ನೇ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ. ಉದ್ಯಮಕ್ಕೆ ಸಿದ್ಧವಾಗಿರುವ ಮಾನವ ಸಂಪನ್ಮೂಲವನ್ನು ಒದಗಿಸಲು ನಾವು ಡಸಾಲ್ಟ್ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಅಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಸಹಾಯಕವಾಗುತ್ತಿರುವ ಸಣ್ಣ ಕೈಗಾರಿಕೆಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಈ ಕ್ಷೇತ್ರಗಳನ್ನು ಮುನ್ನಡೆಸಲು ‌ರಾಜ್ಯ ಸರ್ಕಾರ ಎಲ್ಲಾ ‌ರೀತಿಯ ನೆರವು ನೀಡುತ್ತಿದೆ ‌ಎಂದು‌ ತಿಳಿಸಿದರು.

"ಕರ್ನಾಟಕದಲ್ಲಿ ‌ ಸುಮಾರು 2000 ಎಸ್‌ಎಂಇಗಳ ಪ್ರಬಲ ನೆಲೆಯನ್ನು ಹೊಂದಿದೆ. ಇದು ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ಉಪ-ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತದೆ. ಈ ವಲಯಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟ ‌ಪರಿಣಾಮ, ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ‌ವಿಸ್ತರಣೆಯನ್ನು ಮತ್ತಷ್ಟು ಹೆಚ್ಚಿಸಲು ‌ಅನುಕೂಲವಾಗಿದೆ. ಪರಿಣಾಮ ಹೆಚ್ಚು ಉದ್ದಿಮೆದಾರರಿಗೆ ‌ನಮ್ಮ ರಾಜ್ಯದ ಕಡೆ ಆಕರ್ಷಿತವಾಗಿದೆ ಎಂದು ನಿರಾಣಿ ಅವರು ಪ್ರಶಂಸಿದರು.

"ಭಾರತೀಯ ಸ್ಟಾರ್ಟ್‌ಅಪ್‌ಗಳು ಅನುಭವಗಳಿಂದ ಕಲಿಯುತ್ತಾರೆ. ಭವಿಷ್ಯದಲ್ಲಿ ಅವರ ನಿರ್ಧಾರಗಳಿಗೆ ಇದು ಮಾರ್ಗದರ್ಶನ ನೀಡಲು ಉತ್ತಮ ವೇದಿಕೆಯಾಗಲಿದೆ" ಎಂಬ‌ ವಿಶ್ವಾಸವನ್ನು ‌ಅವರು ವ್ಯಕ್ತಪಡಿಸಿದರು.

ಈ ವೇದಿಕೆಯಲ್ಲಿ ಆರಂಭವಾದ ಸಂವಾದಗಳು, ವಿಚಾರಗಳ ವಿನಿಮಯವು ಮುಂದುವರಿಯುತ್ತದೆ. ದುಬೈ ಎಕ್ಸ್‌ಪೋ 2020 ಅನ್ನು ವಿವಿಧ ‌ರಾಜ್ಯಗಳು, ಉದ್ದಿಮೆದಾರರು ‌ಮತ್ತು ಇತರ ಪಾಲುದಾರರನ್ನು ಭೇಟಿಯಾಗಿ ಸಂವಾದಿಸಲು ಮತ್ತು ಸಹಯೋಗಿಸಲು ವೇದಿಕೆ ಒದಗಿಸಿದ್ದಕ್ಕಾಗಿ ಸಚಿವರು ಪ್ರಶಂಸಿಸಿದರು.

ABOUT THE AUTHOR

...view details