ದೇವನಹಳ್ಳಿ: ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ, ವರಿಷ್ಠರು ನೀಡುವ ಜವಾಬ್ದಾರಿ ನಿಭಾಯಿಸುವೆ ಎಂದು ಮುಖ್ಯಮಂತ್ರಿ ರೇಸ್ನಲ್ಲಿರುವ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಜುಲೈ 26 ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುತ್ತಿದೆ. ಈ ರೇಸ್ನಲ್ಲಿ ಸಚಿವ ಮುರುಗೇಶ್ ನಿರಾಣಿ ಹೆಸರು ಕೂಡ ಕೇಳಿ ಬರುತ್ತಿದೆ.
ಶನಿವಾರ ಕಲಬುರಗಿಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ನಿರಾಣಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ವರಿಷ್ಠರು ನೀಡುವ ಜವಾಬ್ದಾರಿ ನಿಭಾಯಿಸುವೆ, ಯಾರಿಗೆ ಯಾವಾಗ ಜವಾಬ್ದಾರಿ ಕೊಡಬೇಕು ಅನ್ನೋದು ಹೈಕಮಾಂಡ್ಗೆ ಗೊತ್ತಿದೆ, ಎಲ್ಲರ ಜತೆ ಸಮಾಲೋಚನೆ ಮಾಡಿ ತೀರ್ಮಾನ ತೆಗೆದುಕೊಳ್ತಾರೆ. ಇರುವವರನ್ನೇ ಬೇಕಾದ್ರೆ ಹೈಕಮಾಂಡ್ ಮುಂದುವರೆಸಲಿ, ಬೇರೆಯವರನ್ನಾದ್ರೂ ಆಯ್ಕೆ ಮಾಡಲಿ, ವರಿಷ್ಟರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸಿಎಂ ಮತ್ತು ರಾಷ್ಟ್ರೀಯ ನಾಯಕರ ಮಾತುಕತೆ ಏನಾಗುತ್ತೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಅಂತಿಮವಾಗದ ಮುಂದಿನ ಸಿಎಂ; ಹೆಚ್ಚಿಸಿದ ಮತ್ತಷ್ಟು ಕುತೂಹಲ