ಕರ್ನಾಟಕ

karnataka

ETV Bharat / city

ಹೊಸ ಪ್ರದೇಶಗಳನ್ನು ಸೇರಿಸಿ ಬಿಬಿಎಂಪಿ ವಾರ್ಡ್ ಮರುವಿಂಗಡನೆ: ಸಚಿವ ಮಾಧುಸ್ವಾಮಿ - ಕಾನೂನು‌ ಸಚಿವ ಮಾಧುಸ್ವಾಮಿ

ಹೊಸ ಭಾಗಗಳನ್ನೂ ಸೇರಿಸಿ ಹೊಸ ಬಿಬಿಎಂಪಿ ವಾರ್ಡ್ ಗಳನ್ನು ಮಾಡುವ ಚಿಂತನೆ ಇದೆ. ಸುಮಾರು 240-250 ಒಟ್ಟು ವಾರ್ಡ್ ಗಳನ್ನು ಮಾಡುವ ಬಗ್ಗೆ ಜಂಟಿ‌ ಸದನ ಪರಿಶೀಲನಾ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕಾನೂನು‌ ಸಚಿವ ಮಾಧುಸ್ವಾಮಿ ತಿಳಿಸಿದರು.

minister maadhu swamy talk about BBMP Ward Reinsurance
ಹೊಸ ಪ್ರದೇಶಗಳನ್ನು ಸೇರಿಸಿ ಬಿಬಿಎಂಪಿ ವಾರ್ಡ್ ಮರುವಿಂಗಡನೆ: ಸಚಿವ ಮಾಧುಸ್ವಾಮಿ

By

Published : Sep 22, 2020, 2:00 PM IST

ಬೆಂಗಳೂರು: ಹೊಸ ಭಾಗಗಳನ್ನು ಸೇರಿಸಿ ಬಿಬಿಎಂಪಿ ವಾರ್ಡ್ ಗಳ ಮರುವಿಂಗಡನೆ ಮಾಡಲಾಗುತ್ತದೆ ಎಂದು ಕಾನೂನು‌ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಹೊಸ ಪ್ರದೇಶಗಳನ್ನು ಸೇರಿಸಿ ಬಿಬಿಎಂಪಿ ವಾರ್ಡ್ ಮರುವಿಂಗಡನೆ: ಸಚಿವ ಮಾಧುಸ್ವಾಮಿ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೊಸ ಭಾಗಗಳನ್ನೂ ಸೇರಿಸಿ ಹೊಸ ಬಿಬಿಎಂಪಿ ವಾರ್ಡ್ ಗಳನ್ನು ಮಾಡುವ ಚಿಂತನೆ ಇದೆ. ಸುಮಾರು 240-250 ಒಟ್ಟು ವಾರ್ಡ್ ಗಳನ್ನು ಮಾಡುವ ಬಗ್ಗೆ ಜಂಟಿ‌ ಸದನ ಪರಿಶೀಲನಾ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಜಂಟಿ ಸದನ ಪರಿಶೀಲನಾ ಸಮಿತಿ ಮಧ್ಯಂತರ ವರದಿ ಮಂಡನೆ ಮಾಡಲಿದ್ದು, ಅದರ ಆಧಾರದಲ್ಲಿ ಕೋರ್ಟ್ ನಲ್ಲಿ ಚುನಾವಣೆಗೆ ಸಮಯಾವಕಾಶ ಕೋರಲಿದ್ದೇವೆ ಎಂದರು.

ಆದರೆ ಬಿಬಿಎಂಪಿ ವಾರ್ಡ್ ವಿಂಗಡಣೆ ಬಗ್ಗೆ ಗೊಂದಲ ಏರ್ಪಟ್ಟಿರುವುದು ಸಚಿವರ ಹೇಳಿಕೆಯಿಂದ ಗೋಚರವಾಗಿದೆ. ಜಂಟಿ ಸದನ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ರಘು, ಬೆಂಗಳೂರಿನೊಳಗಿರುವ ಭಾಗಗಳನ್ನೇ ಸೇರಿಸುತ್ತೇವೆ, ಹೊಸ ಭಾಗಗಳ ಸೇರ್ಪಡೆ ಇಲ್ಲವೆಂದು ಹೇಳಿದ್ದಾರೆ. ಆದರೆ ಕಾನೂನು ಸಚಿವರು ಹೊಸ ಪ್ರದೇಶಗಳನ್ನು ಸೇರಿಸಲಾಗುತ್ತದೆ ಎಂದು ಹೇಳುವ ಮೂಲಕ ಗೊಂದಲ ಏರ್ಪಟ್ಟಿದೆ.

ABOUT THE AUTHOR

...view details