ಬೆಂಗಳೂರು: ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಪಿಡಿಒಗಳು ಸೇರಿದಂತೆ ಅಧಿಕಾರಿಗಳು ಹೋಗಿರುವ ಸಂಬಂಧ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಪಿಡಿಒಗಳು ಬೇರೆ ಇಲಾಖೆಗೆ ಹೋಗಬೇಕು ಅಂತ ಅವಕಾಶ ಕೋರಿ ಪತ್ರ ಕಳುಹಿಸುತ್ತಾರೆ. ನಮ್ಮ ಇಲಾಖೆಯಿಂದ ಯಾರನ್ನು ಹೊರಗಡೆ ಕಳುಹಿಸುವುದಿಲ್ಲ. ಹೋಗಿರುವವರು ನಮ್ಮ ಇಲಾಖೆಗೆ ಕರಿಸಿಕೊಳ್ಳಬೇಕು ಎಂದು ಹೇಳಿದರು.
ಸದನದ ಮಾತು: ನಮ್ಮ ಸ್ನೇಹ ಹಾಳಾದ್ರೂ ಪರವಾಗಿಲ್ಲ, ಇಲಾಖೆಯಿಂದ ಒಬ್ಬರನ್ನೂ ಕೊಡಲ್ಲ - ಸಚಿವ ಈಶ್ವರಪ್ಪ ಈ ವೇಳೆ ಮಧ್ಯಪ್ರವೇಶಿಸಿದ ವೆಂಕಟರಾವ್ ನಾಡಗೌಡರು, ಹೀಗೆ ಹೇಳಿದರೆ ಆಗುವುದಿಲ್ಲ. ಬೇರೆ ಇಲಾಖೆಗೆ ಹೋಗಿರುವವರನ್ನು ಕರೆಸಿಕೊಳ್ಳಲು ಅಧಿಕಾರ ನಿಮಗೆ ಇದೆ. ಆದೇಶ ಹೊರಡಿಸಿ ಕರೆಸಿಕೊಳ್ಳಬೇಕು. ನಾನು ಮಂತ್ರಿಯಾಗಿದ್ದಾಗ ನನ್ನ ಇಲಾಖೆಗೆ ಕರೆಸಿದ್ದೇನೆ. ತಾವು ಆದೇಶ ಮಾಡಿ ಕರಿಸಿಕೊಳ್ಳಿ. ನಾವು ಯಾಕೆ ಮನವಿ ಮಾಡಬೇಕು ಎಂದು ಪ್ರಶ್ನಿಸಿದರು.
ಈ ಬಗ್ಗೆ ಆದೇಶ ಹೊರಡಿಸಿ: ಎಂ ಬಿ ಪಾಟೀಲ್
ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಮಧ್ಯಪ್ರವೇಶಿಸಿ, ಈಶ್ವರಪ್ಪ ಅವರು ನಮ್ಮ ಇಲಾಖೆಯಿಂದ ಯಾರೂ ಹೊರ ಹೋಗಲು ಬಿಡುವುದಿಲ್ಲ. ಹೋಗಿರುವವರು ವಾಪಸ್ ಬಂದ್ರೆ ಒಳ್ಳೆದು ಅಂತ ಹೇಳ್ತಾರೆ. ವಾಪಸ್ ಬರಲು ಒಂದು ಟೈಮ್ ಪ್ರೇಮ್ ಹಾಕಿಬೇಕು. ಈ ಬಗ್ಗೆ ಆದೇಶ ಹೊರಡಿಸಬೇಕು ಎಂದರು.
ಇಲ್ಲಿಂದ ಯಾರನ್ನೂ ಕೊಡಲ್ಲ: ಕೆಎಸ್ಈ
ಇದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ನಾಲ್ಕು ಜನ ಶಾಸಕರು ಬಹಳ ಬಿಗಿಯಾಗಿ ಹೇಳ್ತಾ ಇದ್ದೀರಿ. ನಿಮ್ಮದೇ ಕ್ಷೇತ್ರದಲ್ಲೇ ಇರುವವರನ್ನು ತರಿಸಿಕೊಂಡರೆ, ನೀವೇ ಬರುತ್ತೀರಿ. ನಮಗೆ ಪಿಎ ಕೊಡಿ ಅಂತ ಕೇಳುತ್ತಿದ್ದಾರೆ. ಇಲ್ಲಿಂದ ಯಾರನ್ನೂ ಕೊಡಲ್ಲ. ಪಿಎ ಕೊಡಿ ಅಂತ ಪತ್ರ ಹಿಡಿದು ಬರುತ್ತಾರೆ.
ನಮ್ಮ ಸ್ನೇಹ ಹಾಳಾದ್ರೂ ಪರವಾಗಿಲ್ಲ. ನಮ್ಮ ಇಲಾಖೆಯಿಂದ ಒಬ್ಬರನ್ನು ಕೊಡಲ್ಲ. ಇವತ್ತೇ ಆದೇಶ ಹೊರಡಿಸಿತ್ತೇನೆ ಎಂದರು. ಆಗ ಸ್ಪೀಕರ್, ಸಚಿವರೇ ಅದು ಹಾಗೆ ಆಗಲ್ಲ. ಸರ್ಕಾರದ ನಿರ್ಣಯ ಮಾಡಿ ಅದನ್ನು ಎಲ್ಲರೂ ಪಾಲಿಸುತ್ತಾರೆ ಎಂದರು.