ಕರ್ನಾಟಕ

karnataka

ETV Bharat / city

ಖುಷಿ ವಿಚಾರ....  ರಾಜ್ಯದಲ್ಲಿ ಕಡಿಮೆಯಾದ ಪಾಸಿಟಿವ್ ಕೇಸ್: ಸಚಿವ ಸುಧಾಕರ್ ಟ್ವೀಟ್ - ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ

ಕಳೆದ ಎರಡು ತಿಂಗಳುಗಳಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು 1000 ಕ್ಕಿಂತ ಕಡಿಮೆಯಾಗಿವೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳು 5041ಕ್ಕೆ ಇಳಿದಿದ್ದು, ಸಕಾರಾತ್ಮಕ ದರವು ಶೇ 3.8 ರಷ್ಟು ಕಡಿಮೆಯಾಗಿದೆ. ಇಂದು 115 ಜನರು ಸೋಂಕಿನಿಂದ ಮೃತಪಟ್ಟಿದ್ದು, 1.32 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್​​ನಲ್ಲಿ ಮಾಹಿತಿ ಹೊರ ಹಾಕಿದ್ದಾರೆ.

minister-k-sudhakar-tweet-
ಸಚಿವ ಸುಧಾಕರ್

By

Published : Jun 15, 2021, 6:17 PM IST

Updated : Jun 15, 2021, 7:49 PM IST

ಬೆಂಗಳೂರು:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಇಳಿಕೆಯಾಗುತ್ತಿದ್ದು, ಪಾಸಿಟಿವ್ ರೇಟು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇಂದು 1,32,600 ಜನರಿಗೆ ಕೊರೊನಾ‌ ಟೆಸ್ಟ್ ಮಾಡಿದ್ದು, ಆ ಪೈಕಿ 5041 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,77,010ಕ್ಕೆ ಏರಿಕೆ ಕಂಡಿದೆ.

ಇಂದು ಪಾಸಿಟಿವಿಟಿ ದರ ಶೇ.3.80ಕ್ಕೆ ಇಳಿದಿದೆ. ಇನ್ನು 14,785 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 25,81,559 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,62,282 ರಷ್ಟು ಇದೆ. ಕೋವಿಡ್​​ಗೆ 115 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 33,148 ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ ಮತ್ತೆ ಶೇ.2.28 ರಷ್ಟು‌ ಇದೆ.‌ ಇನ್ನು ವಿಮಾನ ನಿಲ್ದಾಣದಿಂದ 167 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳ್ಳಪಟ್ಟಿದ್ದಾರೆ.

ಕಳೆದ ಎರಡು ತಿಂಗಳುಗಳಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು 1000 ಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳು 5041ಕ್ಕೆ ಇಳಿದಿದ್ದು, ಸಕಾರಾತ್ಮಕ ದರವು ಶೇ3.8 ರಷ್ಟು ಕಡಿಮೆಯಾಗಿದೆ. ಇಂದು 115 ಜನರು ಸೋಂಕಿನಿಂದ ಮೃತಪಟ್ಟಿದ್ದು, 1.32 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್​​ನಲ್ಲಿ ಮಾಹಿತಿ ಹೊರ ಹಾಕಿದ್ದಾರೆ.

Last Updated : Jun 15, 2021, 7:49 PM IST

ABOUT THE AUTHOR

...view details