ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಮತ್ತೆ ಏರಿಕೆಯತ್ತ ಕೋವಿಡ್‌ : ಆರೋಗ್ಯ ಇಲಾಖೆಯಿಂದ ಇಂದು ಪರಿಶೀಲನಾ ಸಭೆ - ಕೋವಿಡ್ ಪರಿಶೀಲನಾ ಸಭೆ

ಕೂಡಲೇ 2ನೇ ಡೋಸ್ ಮತ್ತು 3ನೇ ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಈಗಾಗಲೇ ಸೋಂಕು ಹರಡದಂತೆ ರಾಜ್ಯದಲ್ಲಿ ಎಚ್ಚರಿಕೆ ಕ್ರಮವಹಿಸಿದ್ದೇವೆ. ವಿಮಾನ ನಿಲ್ದಾಣದಲ್ಲಿ ಅಗತ್ಯವಾದ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ದೆಹಲಿಯಲ್ಲಿ ಬಂದ ಮೇಲೆ ಬೇರೆ ರಾಜ್ಯಗಳಿಗೂ ಇದು ಹರಡುತ್ತದೆ. ಹೀಗಾಗಿ, ಜನರು ಎಚ್ಚರಿಕೆಯಿಂದ ಇರಬೇಕು‌ ಎಂದು ಸಚಿವರು ಸಲಹೆ ನೀಡಿದರು..

COVID-19 review meeting
ಆರೋಗ್ಯ ಇಲಾಖೆಯಲ್ಲಿ ಪರಿಶೀಲನಾ ಸಭೆ

By

Published : Apr 20, 2022, 12:20 PM IST

ಬೆಂಗಳೂರು :ರಾಜ್ಯದಲ್ಲಿ ಸತತ ಒಂದು ವಾರದಿಂದ ನಿಧಾನವಾಗಿ ಕೋವಿಡ್​​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. 4ನೇ ಅಲೆ ಆರಂಭವಾಗಿದೆಯಾ? ಎಂಬ ಅನುಮಾನ ಶುರುವಾಗಿದೆ‌.‌ ಈಗಾಗಲೇ ದೆಹಲಿ ಸೇರಿದಂತೆ ಅಕ್ಕಪಕ್ಕದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಹೀಗಾಗಿ, ಆರೋಗ್ಯ ಇಲಾಖೆಯಿಂದ ಪರಿಶೀಲನಾ ಸಭೆ ಕರೆಯಲಾಗಿದೆ.

ಈ ಕುರಿತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು, ಕಳೆದ ಎರಡು ವಾರದಿಂದ ದೆಹಲಿ ಸೇರಿದಂತೆ ಹಲವು ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿವೆ. ಹೀಗಾಗಿ, ಆಸ್ಪತ್ರೆ ಸೇರುವವರ ಪ್ರಮಾಣದ ಬಗ್ಗೆ ನಾವು ಪರಿಶೀಲನೆ ಮಾಡಬೇಕು. ಈ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂದು ಆರೋಗ್ಯ ಇಲಾಖೆಯಲ್ಲಿ ಪರಿಶೀಲನಾ ಸಭೆ ಇದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಜನರು ಉದಾಸೀನ ಮಾಡಬಾರದು :ಜನರು ಉದಾಸೀನ ಮಾಡದೇ ಕಾರ್ಯಕ್ರಮ, ಸಭೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜತೆಗೆ ಕೋವಿಡ್​​ 3ನೇ ಡೋಸ್ ಲಸಿಕೆಯನ್ನು ಪಡೆಯಬೇಕು ಎಂದು ಸಚಿವ ಸುಧಾಕರ್​​ ಮನವಿ ಮಾಡಿದರು. ರಾಜ್ಯದಲ್ಲಿ ಸುಮಾರು 30 ಲಕ್ಷ ಜನರು ಇನ್ನೂ 2ನೇ ಡೋಸ್ ತೆಗೆದುಕೊಂಡಿಲ್ಲ.

ಕೂಡಲೇ 2ನೇ ಡೋಸ್ ಮತ್ತು 3ನೇ ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಈಗಾಗಲೇ ಸೋಂಕು ಹರಡದಂತೆ ರಾಜ್ಯದಲ್ಲಿ ಎಚ್ಚರಿಕೆ ಕ್ರಮವಹಿಸಿದ್ದೇವೆ. ವಿಮಾನ ನಿಲ್ದಾಣದಲ್ಲಿ ಅಗತ್ಯವಾದ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ದೆಹಲಿಯಲ್ಲಿ ಬಂದ ಮೇಲೆ ಬೇರೆ ರಾಜ್ಯಗಳಿಗೂ ಇದು ಹರಡುತ್ತದೆ. ಹೀಗಾಗಿ, ಜನರು ಎಚ್ಚರಿಕೆಯಿಂದ ಇರಬೇಕು‌ ಎಂದು ಸಚಿವರು ಸಲಹೆ ನೀಡಿದರು.

ರಾಜ್ಯದಲ್ಲಿ ಸೋಂಕು ನಿಯಂತ್ರಣ :ದೆಹಲಿಯಲ್ಲಿ ಕೋವಿಡ್​​ ಕೇಸ್ ಹೆಚ್ಚಾಗುತ್ತಿದ್ದು, ಇದು 4ನೇ ಅಲೆಯೇ? ಅಥವಾ ಬೇರೆ ಯಾವ ಕಾರಣಕ್ಕೆ ಅಂತಾ ಪರಿಶೀಲಿಸಬೇಕು. ರಾಜ್ಯದಲ್ಲಿ ಸದ್ಯ ನಾಲ್ಕನೇ ಅಲೆ ಬಂದಿಲ್ಲ. ನಮ್ಮಲ್ಲಿ ಸದ್ಯ ಕೋವಿಡ್ ಏರಿಕೆಯಾದರೂ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ.‌ ನಿತ್ಯ ನಾವು ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಏರಿಕೆ ಕಂಡು ಬಂದಿಲ್ಲ. 'ಲಸಿಕಾ ಅಭಿಯಾನ' ಉತ್ತಮವಾಗಿ ಆಗಿರೋದು ಇದಕ್ಕೆ ಕಾರಣ ಇರಬಹುದು. ಈಗಾಗಲೇ ರಾಜ್ಯದಲ್ಲಿ 10.5 ಕೋಟಿ‌ ಡೋಸ್ ಲಸಿಕೆ ನೀಡಲಾಗಿದೆ. 12 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಹೀಗಾಗಿ, ಸದ್ಯ ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದರು.

ಕಠಿಣ ನಿಯಮ ಜಾರಿ ವಿಚಾರವಾಗಿ ಮಾಹಿತಿ ನೀಡಿದ ಸಚಿವರು, ಈಗಲೇ ಕಠಿಣ‌ ನಿಯಮದ ಬಗ್ಗೆ ಹೇಳುವುದು ಕಷ್ಟ. ಜನರು ಕೆಲ ನಿಯಮ ಪಾಲನೆ ಮಾಡಬೇಕು. ಕಠಿಣ‌ ನಿಯಮಗಳ ಬಗ್ಗೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಯಾವುದೇ ಕಠಿಣ‌ ನಿಯಮ ಇಲ್ಲ ಎಂದು ಸಚಿವ ಸುಧಾಕರ್​​ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ ಪತ್ತೆ.. 40 ಮಂದಿ ಸಾವು

ABOUT THE AUTHOR

...view details