ಕರ್ನಾಟಕ

karnataka

ETV Bharat / city

ಹೆಣ್ಣುಮಕ್ಕಳು ಶೌಚಾಲಯ ಬಳಸದೇ ಬಯಲು ಬಹಿರ್ದೆಸೆಗೆ ಹೋದರೆ ಏನೂ ಮಾಡೋಕೆ ಆಗಲ್ಲ: ಸಚಿವ ಈಶ್ವರಪ್ಪ - ಶೌಚಾಲಯ ಬಳಕೆ ಬಗ್ಗೆ ಸಚಿವ ಈಶ್ವರಪ್ಪ ಮಾತು

ಕಾಂಗ್ರೆಸ್ ಬರೀ ಹಿಂದು- ಮುಸ್ಲಿಂ ಗಲಾಟೆ ನಡೆಸುವ ಪ್ರಯತ್ನ ನಡೆಸುತ್ತಿದೆ. ನಾವು ಚುನಾವಣೆಹಗೆ ಹೋಗಬೇಕಾದರೆ, ಹಿಂದಿನ ಚುನಾವಣೆಯಲ್ಲಿ ಏನು ಭರವಸೆ ನೀಡಿ ಅದನ್ನು ಪೂರೈಸಿದ್ದೇವೆ ಎಂಬುದನ್ನು ಸಾಬೀತು ಮಾಡಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದರು..

eshwarappa
ಸಚಿವ ಈಶ್ವರಪ್ಪ

By

Published : Apr 9, 2022, 11:03 PM IST

ಬೆಂಗಳೂರು:ಹೆಣ್ಣು ಮಕ್ಕಳ ಗೌರವಕ್ಕಾಗಿ ಸರ್ಕಾರ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ, ಅದನ್ನು ಬಳಸದೇ ಬಯಲು ಬಹಿರ್ದೆಸೆಗೆ ಹೋದರೆ ನಾವೇನೂ ಮಾಡೋಕೆ ಆಗಲ್ಲ. ಆ ರೀತಿಯಾಗಿಯೇ ನಡೆದುಕೊಳ್ಳುವ ಜನರಿಗೆ ಎನೂ ಹೇಳೋಕೆ ಆಗಲ್ಲ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದರು.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಹೆಣ್ಣುಮಗಳನ್ನು ಮದುವೆ ಮಾಡಿಕೊಟ್ರೆ, ನಿಮಗೆ ಅವಳನ್ನು ಉತ್ತಮವಾಗಿ ನಡೆಸಿಕೊಳ್ಳೋದೇ ಗೊತ್ತಿಲ್ಲ ಅಂದ್ರೆ ಏನು ಮಾಡೋದಕ್ಕೆ ಆಗುತ್ತದೆ ಎಂದು ಪ್ರಶ್ನಿಸುವ ಮೂಲಕ ಶೌಚಾಲಯಗಳನ್ನು ನಿರ್ಮಿಸಿ ಬಳಸಿಕೊಳ್ಳಲು ಗೊತ್ತಿಲ್ಲದಿದ್ದರೆ ಏನೂ ಮಾಡೋಕೆ ಆಗಲ್ಲ ಎಂಬರ್ಥದಲ್ಲಿ ಹೇಳಿದರು.

ಕಾಂಗ್ರೆಸ್​ ವಿರುದ್ಧ ಟೀಕೆ:ಕಾಂಗ್ರೆಸ್ ಬರೀ ಹಿಂದು- ಮುಸ್ಲಿಂ ಗಲಾಟೆ ನಡೆಸುವ ಪ್ರಯತ್ನ ನಡೆಸುತ್ತಿದೆ. ನಾವು ಚುನಾವಣೆಹಗೆ ಹೋಗಬೇಕಾದರೆ, ಹಿಂದಿನ ಚುನಾವಣೆಯಲ್ಲಿ ಏನು ಭರವಸೆ ನೀಡಿ ಅದನ್ನು ಪೂರೈಸಿದ್ದೇವೆ ಎಂಬುದನ್ನು ಸಾಬೀತು ಮಾಡಬೇಕು. ನಾನು ಏನು ಸಾಧನೆ ಮಾಡಿದ್ದೇನೆ ಎಂಬುದನ್ನು ಜನರಿಗೆ ತಿಳಿಸಲು ಈ ರೀತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದೇನೆ ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಗತಿ ವರದಿ:ಪ್ರಧಾನಿ ನರೇಂದ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ರಾಜ್ಯದಲ್ಲಿ ಮನೆ ಮನೆಗೂ ಗಂಗೆ ಹೆಸರಲ್ಲಿ ಅನುಷ್ಠಾನಗೊಳ್ಳುತ್ತಿದೆ. ರಾಜ್ಯದಲ್ಲಿ 2020ರಲ್ಲಿ ಮನೆ ಮನೆಗೂ ಗಂಗೆ ಯೋಜನೆಯು ಆರಂಭಿಸಲಾಯಿತು. ಈಗಾಗಲೇ 3,000 ಗ್ರಾಮಗಳಿಗೆ ಶೇಕಡಾ 100ರಷ್ಟು ಮನೆಗಳಿಗೆ ಕೊಳಾಯಿ ಮೂಲಕ ವೀರು ಸರಬರಾಜು ಮಾಡಲಾಗುತ್ತಿದೆ. 50,000 ಹೆಚ್ಚಿನ ಗ್ರಾಮಗಳಲ್ಲಿ ಮನೆ ಮನೆಗೂ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಒಈಗಾಗಲೇ ₹3,325 ಕೋಟಿ ಹಣವನ್ನು ಮತ್ತು ರಾಜ್ಯದ ಪಾಲಾದ ₹2,323 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ನೀರು ಪರೀಕ್ಷೆಗಾಗಿ 31 ಜಿಲ್ಲೆಗಳ 46 ತಾಲ್ಲೂಕಿನಲ್ಲಿ ಲ್ಯಾಬೋರೇಟರಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 18,600 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಯೋಜನೆಯ ಆರಂಭಕ್ಕೆ ಮುನ್ನ ರಾಜ್ಯದಲ್ಲಿ ಶೇಕಡಾ 25ರಷ್ಟು ಮನೆಗಳಿಗೆ ನಲ್ಲಿಯ ನೀರಿನ ಸಂಪರ್ಕವಿತ್ತು. ಈ ಯೋಜನೆಯ ತರುವಾಯ 20,56,650 ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ನೀಡಲಾಗಿದೆ. ಈಗ ರಾಜ್ಯದಲ್ಲಿ ಶೇಕಡಾ 46ರಷ್ಟು ಮನೆಗಳಿಗೆ ಕೂಳಾಯಿ ನೀರು ಸಂಪರ್ಕ ಲಭ್ಯವಿದೆ ಎಂದರು.

ಕರ್ನಾಟಕ ಈ ಬಾರಿಯೂ ಮನ್ ರೇಗಾ ಕಾರ್ಯಕ್ರಮದ ಅನುಷ್ಠಾನದಲ್ಲಿ ದಾಖಲೆ ಪ್ರಗತಿಯನ್ನು ಸಾಧಿಸಿದೆ. 21-22 ರಲ್ಲಿ 13 ಕೋಟಿ ಮಾನವ ದಿನಗಳ ಗುರಿಯನ್ನು ನೀಡಲಾಗಿತ್ತು ಅದನ್ನು ಡಿಸೆಂಬರ್ ಅಂತ್ಯಕ್ಕೆ ಮುಟ್ಟಲಾಯಿತು. ಹೆಚ್ಚವರಿ 3ಕೋಟಿ ದಿನಗಳ ಗುರಿಯನ್ನು ನೀಡಲಾಯಿತು. ಮಾರ್ಚ್ಅಂತ್ಯಕ್ಕೆ 3ಕೋಟಿ 13 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಿ ಗುರಿ ಮೀರಿದ ಸಾಧನೆ ಮತ್ತೊಮ್ಮೆ ಮಾಡಲಾಗಿದೆ. ರಾಜ್ಯದ 32 ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಭಾಗವಹಿಸಿದ್ದಾರೆ. ಒಟ್ಟು 3,957.45ಕೋಟಿ ಹಣವನ್ನು ಕೂಲಿ ರೂಪದಲ್ಲಿ ನೀಡಲಾಗಿದೆ. ಇದರಲ್ಲಿ 8.8ಲಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆದಿವೆ ಎಂದರು.

ಏ.11 ರಂದು ಗ್ರಾಮೀಣಾಭಿವೃದ್ಧಿ‌ ಸಚಿವರ ಸಭೆ ಇದ್ದು, ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಭೆ ಕರೆದಿದ್ದಾರೆ. ಎಲ್ಲಾ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಓದಿ:ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಸಾಧ್ಯವಿಲ್ಲ.. ಪಠ್ಯದಿಂದ ತೆಗೆದ್ರೂ ಜನರ ಹೃದಯದಿಂದ ತೆಗೆಯಲಾಗಲ್ಲ.. ಹೆಚ್ ವಿಶ್ವನಾಥ್

For All Latest Updates

TAGGED:

ABOUT THE AUTHOR

...view details