ಬೆಂಗಳೂರು:ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಗೆ ಅನುಮೋದನೆ ದೊರೆತಿದ್ದು, ಈ ತಿದ್ದುಪಡಿಯಿಂದ ಕೈಗಾರಿಕಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಗೆ ಕ್ಯಾಬಿನೆಟ್ ಒಪ್ಪಿಗೆ - karnataka industrial policy
ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಗೆ ಅನುಮೋದನೆ ಸಿಕ್ಕಿದ್ದು, ಇದು ರಾಜ್ಯದ ಕೈಗಾರಿಕಾ ಇತಿಹಾಸದಲ್ಲಿ ಮಹತ್ತರ ಬದಲಾವಣೆ ಎಂದು ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.
ಕ್ಯಾಬಿನೆಟ್ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಉನ್ನತ ಮಟ್ಟದ ಸಮಿತಿ ಹಾಗೂ ಜಿಲ್ಲಾಮಟ್ಟದ ಸಮಿತಿ ಇದೆ. ಈ ಸಮಿತಿಗಳು ಅನುಮತಿ ನೀಡಿದರೆ ಆ ಭೂಮಿಯಲ್ಲಿ ತಕ್ಷಣ ಕೈಗಾರಿಕೆ ಪ್ರಾರಂಭ ಮಾಡಲು ಹೊಸ ಕಾನೂನು ಅನುವು ಮಾಡಿಕೊಡಲಿದೆ ಎಂದರು.
ಸ್ವಯಂ ದೃಢೀಕರಣ ಪತ್ರ ಪಡೆದು ಕೈಗಾರಿಕೆ ಪ್ರಾರಂಭಿಸಬಹುದಾಗಿದ್ದು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಈ ಕಾನೂನು ಇದೆ. ಇದು ಎಲ್ಲಾ ಕೈಗಾರಿಕೆಗಳಿಗೂ ಇದು ಅನ್ವಯ ಆಗಲಿದೆ. ಜೊತೆಗೆ ವಿದ್ಯುತ್ ವಾಹನ ತಯಾರಿಕಾ ಕೈಗಾರಿಕೆಗಳಿಗೆ ಕಂದಾಯ ಇಲಾಖೆ ಸ್ಟಾಂಪ್ ಡ್ಯೂಟಿಯಿಂದ ವಿನಾಯಿತಿ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.