ಬೆಂಗಳೂರು: ನಿತ್ಯ ರಾಜ್ಯದಲ್ಲಿ 1,500 ಮಂದಿಗೆ ಕೋವಿಡ್ -19ರ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿಪಕ್ಷ ನಾಯಕರು ವಾಸ್ತವದ ಆಧಾರದ ಮೇಲೆ ಮಾತನಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದರು.
ಪ್ರತಿಪಕ್ಷ ನಾಯಕರು ವಾಸ್ತವ ಅರಿತು ಮಾತನಾಡಬೇಕು: ಸಚಿವ ಡಾ.ಕೆ.ಸುಧಾಕರ್ ತಿರುಗೇಟು - ಕರ್ನಾಟಕ ರಾಜಕೀಯ ಸುದ್ದಿ
ಮೈಸೂರಿನಲ್ಲಿ ದಾಖಲಾದ ಪ್ರಕರಣಗಳು ಎಲ್ಲವೂ ಹೋಮ್ ಕ್ವಾರಂಟೈನ್ ಆದವರು. ಹೀಗಾಗಿ ಇದು ಮುಂದೆ ಕಡಿಮೆ ಆಗಲಿದೆ. ಆತಂಕ ಬೇಡ. ನಾವಿನ್ನು 300ರ ಆಸುಪಾಸಿನಲ್ಲೇ ಇದ್ದೇವೆ ಎಂದು ಸುಧಾಕರ್ ಹೇಳಿದರು.
ಸಚಿವ ಡಾ.ಕೆ.ಸುಧಾಕರ್
ವಿಧಾನಸೌಧದಲ್ಲಿ ಇಂದು ಶಿವಮೊಗ್ಗ ಜಿಲ್ಲೆಯ ಸರ್ವತೊಮುಖ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸಿದ ನಂತರ ಮಾತನಾಡಿದರು.
1,500 ಪರೀಕ್ಷೆಗಳಲ್ಲಿ 10 ರಿಂದ 15 ಪ್ರಕರಣಗಳು ಪತ್ತೆಯಾಗುತ್ತಿದೆ. ಮೈಸೂರಿನಲ್ಲಿ ಮೊದಲ ಪ್ರಕರಣ ಪತ್ತೆಯಾದ ಜಾಗದಲ್ಲೇ ಹೆಚ್ಚು ಕೇಸ್ ದಾಖಲಾಗಲಿವೆ ಎಂಬುದು ಗೊತ್ತಿತ್ತು ಎಂದು ಹೇಳಿದರು.