ಬೆಂಗಳೂರು: ಲಾಕ್‌ಡೌನ್ ಮಾಡಿದರೆ ಕೊರೊನಾ ಹೋಗುತ್ತಾ ಅನ್ನುವ ಪ್ರಶ್ನೆ ಎದುರಾಗಿದೆ. ಮತ್ತೆ ಲಾಕ್‌ಡೌನ್ ಮಾಡಬೇಕೇ, ಬೇಡವೇ ಎಂಬುದರ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಲಾಕ್‌ಡೌನ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಸಿ.ಟಿ.ರವಿ - ಲಾಕ್‌ಡೌನ್ ಅಪ್ಡೇಟ್
ಈ ಮೊದಲು ಲಾಕ್‌ಡೌನ್ ಮಾಡಲಾಗಿತ್ತು. ಆಗ ಕೊರೊನಾ ವೈರಸ್ ತಡೆಗಟ್ಟಲಾಗಲಿಲ್ಲ. ಈಗ ಮತ್ತೆ ಲಾಕ್‌ಡೌನ್ ಮಾಡಿದರೆ ವೈರಸ್ ಹರಡುವುದನ್ನು ತಡೆಯಲಾಗುತ್ತದೆಯೇ? ಎಂದು ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
![ಲಾಕ್‌ಡೌನ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಸಿ.ಟಿ.ರವಿ Tourism Minister CT Ravi](https://etvbharatimages.akamaized.net/etvbharat/prod-images/768-512-7748215-624-7748215-1592985388487.jpg)
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ
ವಿಧಾನಸೌಧದಲ್ಲಿ ಸಚಿವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಧಾನಸೌಧದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಹಿಂದೆ 70 ದಿನ ಲಾಕ್‌ಡೌನ್ ಆಗಿತ್ತು. ಕೊರೊನಾ ಹೋಗಿದೆಯೇ? ಯಾರಾದರೂ ಹರಡಿಸುತ್ತಲೇ ಇರುತ್ತಾರೆ. ಲಾಕ್‌ಡೌನ್ ಇದಕ್ಕೆ ಪರಿಹಾರನಾ? ಎಂಬುದನ್ನು ನಾಳೆ ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.