ಕರ್ನಾಟಕ

karnataka

ETV Bharat / city

ಗೌರಿ-ಗಣೇಶ ಹಬ್ಬ: ಮಹಿಳೆಯರಿಗೆ ಬಾಗಿನ, ಪರಿಸರ ಸ್ನೇಹಿ ಗಣೇಶ ಮೂರ್ತಿ ನೀಡಿದ ಸಚಿವ - ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆ.ಆರ್​. ಪುರ ಕ್ಷೇತ್ರದ ಮಹಿಳೆಯರಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಾಗೂ ಬಾಗಿನ ನೀಡುವ ಮೂಲಕ ಶುಭಾಶಯ ಕೋರಿದರು.

Minister Birathi Basavaraj Given Eco-friendly Ganesh Murthy  To womens
ಗೌರಿ-ಗಣೇಶ ಹಬ್ಬ: ಮಹಿಳೆಯರಿಗೆ ಬಾಗಿನ, ಪರಿಸರ ಸ್ನೇಹಿ ಗಣೇಶ ಮೂರ್ತಿ ನೀಡಿದ ಸಚಿವ

By

Published : Aug 21, 2020, 7:51 PM IST

ಕೆ.ಆರ್​.ಪುರ (ಬೆಂಗಳೂರು): ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆ.ಆರ್​.ಪುರ ಕ್ಷೇತ್ರದ ಮಹಿಳೆಯರಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಾಗೂ ಬಾಗಿನ ನೀಡುವ ಮೂಲಕ ಶುಭಾಶಯ ಕೋರಿದರು.

ಗೌರಿ-ಗಣೇಶ ಹಬ್ಬ: ಮಹಿಳೆಯರಿಗೆ ಬಾಗಿನ, ಪರಿಸರ ಸ್ನೇಹಿ ಗಣೇಶ ಮೂರ್ತಿ ನೀಡಿದ ಸಚಿವ

ಗೌರಿ-ಗಣೇಶ ಹಬ್ಬವನ್ನು ಕ್ಷೇತ್ರದ ಎಲ್ಲಾ ನಾಗರಿಕರು ಮನೆಯಲ್ಲಿಯೇ ಇದ್ದು ಆಚರಿಸುವಂತೆ ಸಲಹೆ ನೀಡಿದರು. ಗೌರಿ-ಗಣೇಶ ಹಬ್ಬಕ್ಕೆ ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿ ಸೀರೆ, ಅರಿಶಿನ-ಕುಂಕುಮ ಬಾಗಿನ ನೀಡುವುದು ಹಿಂದೂ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅದನ್ನು ನಾವೆಲ್ಲಾ ಉಳಿಸಿಕೊಂಡು ಹೋಗಬೇಕು. ಈ ಹಬ್ಬಗಳ ಆಚರಣೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯೂ ಪಾಲಿಸುವಂತೆ ಮಾಡಬೇಕು ಎಂದರು.

ಇದೇ ವೇಳೆ ಪಾಲಿಕೆ ಮಾಜಿ ನಾಮನಿರ್ದೇಶನ ಸದಸ್ಯ ಅಂತೋಣಿಸ್ವಾಮಿ ಅವರು ಕೂಡ ಕೆ.ಆರ್. ಪುರ ವಾರ್ಡ್​ ಮಹಿಳೆಯರಿಗೆ ಗಣೇಶನ ಮೂರ್ತಿ, ಸೀರೆ ಹಾಗೂ ಅರಿಶಿನ-ಕುಂಕುಮ ನೀಡಿ, ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದರು.

ABOUT THE AUTHOR

...view details