ಬೆಂಗಳೂರು: ಕೇಂದ್ರವು ಕೃಷಿ ನೀತಿಗೆ ತಂದಿರುವ ತಿದ್ದುಪಡಿ ರೈತರ ಪರವಾಗಿದೆ. ಕೇಂದ್ರದ ಕೃಷಿ ಕಾಯ್ದೆಗಳಿಗೆ ರೈತ ಸಂಘಟನೆಗಳು ವಿರೋಧ ತೋರುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ರೈತ ಸಂಘದ ನೆರಳಿನಡಿ ಹೋಗಿ ಕಾಂಗ್ರೆಸ್ನವರು ಬಾವುಟ ಹಾರಿಸ್ತಾರೆ: ಬಿ.ಸಿ.ಪಾಟೀಲ್
ರೈತರು ತಮ್ಮ ಮನೆ ಬಾಗಿಲುಗಳಲ್ಲೇ ಉತ್ಪನ್ನಗಳನ್ನು ಮಾರಿಕೊಳ್ಳಬಹುದು. ಎಪಿಎಂಸಿಗಳಿಗೆ ತಂದೂ ಮಾರಬಹುದು. ಕೃಷಿ ಕಾಯ್ದೆಗಳು ರೈತರ ಪರವಾಗಿವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರಿಂದಲೂ ಭಾರತ್ ಬಂದ್ಗೆ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರು ತಮ್ಮ ಮನೆ ಬಾಗಿಲುಗಳಲ್ಲೇ ಉತ್ಪನ್ನಗಳನ್ನು ಮಾರಿಕೊಳ್ಳಬಹುದು. ಎಪಿಎಂಸಿಗಳಿಗೆ ತಂದೂ ಮಾರಬಹುದು. ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ರೈತರು ಬಂದ್, ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.
ರೈತರ ಬಂದ್ಗೆ ಕಾಂಗ್ರೆಸ್ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀರು ಹೊಯ್ಕೊಳೋರ ಕೆಳಗೆ ನುಸುಳಲು ಕಾಂಗ್ರೆಸ್ ಪ್ರಯತ್ನ ಮಾಡ್ತಿದೆ. ರೈತ ಸಂಘದವರ ನೆರಳಿನಡಿ ಕಾಂಗ್ರೆಸ್ನವರು ಬಾವುಟ ಹಾರಿಸಲು ಹೊರಟಿದ್ದಾರೆ. ಇದು ಕಾಂಗ್ರೆಸ್ನವರ ಅಧೋಗತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.