ಬೆಂಗಳೂರು: ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು. ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಕೊಠಡಿ ಪೂಜೆ ಮಾಡಿ ಕಚೇರಿ ಪ್ರವೇಶ ಮಾಡಿ ಬಳಿಕ ಮಾತನಾಡಿದ ಅವರು, ಕೆಲವರು ತಮಗೆ ಇಂತಹದ್ದೇ ಖಾತೆ ಬೇಕು ಎಂದು ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ, ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು ಎಂದರು.
17 ಜನ ಮತ್ತು 105 ಜನ ಅನ್ನೋದೇ ಮುಖ್ಯ ಅಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ. ಹಾಗಾಗಿ ಸರ್ಕಾರ ಅಧಿಕಾರಕ್ಕೆ ಬರಲು 105 ಶಾಸಕರು ಹಾಗೂ 17 ಜನರೂ ಕಾರಣ ಎಂದರು.