ಕರ್ನಾಟಕ

karnataka

ETV Bharat / city

ಕಾರ್ಯಕರ್ತರಿಂದ ಪ್ರಧಾನಿ ಮೋದಿಗೆ ಅಭಿನಂದನಾ ಪತ್ರ ಬರೆಸಿದ ಸಚಿವ ಅಶ್ವತ್ಥ ನಾರಾಯಣ್ - congratulatory letter

ಸಚಿವ ಡಾ. ಅಶ್ವತ್ಥ ನಾರಾಯಣ್ ಅರಮನೆ ನಗರ ವಾರ್ಡ್​​​ನ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಮುಖಾಂತರ ಪ್ರಧಾನಮಂತ್ರಿಗೆ ಅಭಿನಂದನಾ ಅಂಚೆ ಪತ್ರ ಬರೆಸಿದರು.

Minister Ashwaththa Narayan wrote a congratulatory letter to Modi from activists
ಕಾರ್ಯಕರ್ತರಿಂದ ಮೋದಿಗೆ ಅಭಿನಂದನಾ ಪತ್ರ ಬರೆಸಿದ ಸಚಿವ ಅಶ್ವತ್ಥನಾರಾಯಣ್

By

Published : Oct 7, 2021, 3:44 PM IST

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಅವರು ಇಂದು ಬೆಳಗ್ಗೆ ಉತ್ತಮ ಆಡಳಿತ ದಿನದ (ಗುಡ್ ಗವರ್ನೆನ್ಸ್ ಡೇ) ಪ್ರಯುಕ್ತ ಅರಮನೆ ನಗರ ವಾರ್ಡ್​​​ನ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಮುಖಾಂತರ ಪ್ರಧಾನಮಂತ್ರಿಗೆ ಅಭಿನಂದನಾ ಅಂಚೆ ಪತ್ರ ಬರೆಸಿದರು.

ಕಾರ್ಯಕರ್ತರ ಮನೆಗೆ ಸಚಿವ ಅಶ್ವತ್ಥ ನಾರಾಯಣ್ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ 20 ವರ್ಷಗಳ ಸಮರ್ಥ- ಜನಪರ ಆಡಳಿತದ ಕುರಿತು ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಸಚಿವರು ಮನವಿ ಮಾಡಿದರು. ಕೇಂದ್ರ ಸರ್ಕಾರವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೈಗೊಂಡಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ಜನಮನಕ್ಕೆ ತಲುಪಿಸಬೇಕಿದೆ ಎಂದರು.

ಇದನ್ನೂ ಓದಿ:ವೋಟಿಗಾಗಿ ಆರ್‌ಎಸ್‌ಎಸ್ ದೂಷಿಸಿ ನಿಮ್ಮ ವ್ಯಕ್ತಿತ್ವವನ್ನ ಚಿಲ್ಲರೆ ಮಾಡಬೇಡಿ: ಹೆಚ್‌ಡಿಕೆಗೆ ಕಟೀಲ್ ಸಲಹೆ

ಈಗಾಗಲೇ ಪಕ್ಷದ ಮುಖಂಡರು ಪ್ರಧಾನಿಗೆ ಪತ್ರ ಬರೆದಿದ್ದು, ಈಗ ಕಾರ್ಯಕರ್ತರಿಂದ ಪತ್ರ ಬರೆಸುವ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಲು ಮುಂದಾಗಿದ್ದಾರೆ.

ABOUT THE AUTHOR

...view details