ಬೆಳಗಾವಿ:ಆರ್ಎಸ್ಎಸ್ ದೇಶದ ಅಭಿವೃದ್ಧಿಯ ಅಜೆಂಡಾ ಹೊಂದಿದೆ. ಮತಾಂತರ ನಿಷೇಧ ಮಾಡುವುದನ್ನು ಆರ್ಎಸ್ಎಸ್ ಬಯಸಿತ್ತು ಎಂದು ಹೇಳುವ ಮೂಲಕ ಮತಾಂತರ ನಿಷೇಧ ಮಸೂದೆ ಆರ್ಎಸ್ಎಸ್ ಅಜೆಂಡಾ ಎಂಬುದನ್ನು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಒಪ್ಪಿಕೊಂಡಿದ್ದಾರೆ.
ಮತಾಂತರ ನಿಷೇಧ ಮಸೂದೆ ಮಂಡನೆಯ ಬಳಿಕ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕಾನೂನು ಸಮಾಜದ ಪರವಾಗಿದೆ. ಮತಾಂತರ ನಿಷೇಧದ ಬಗ್ಗೆ ಸಂವಿಧಾನದಲ್ಲೇ ಇದೆ. ಹೆಚ್ಚಿನ ಸ್ಪಷ್ಟತೆ ಕೊಡೋದಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಇದು ಆರ್ಎಸ್ಎಸ್ ಅಜೆಂಡಾ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.
ಧರ್ಮ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ ಅಸೆಂಬ್ಲಿಯಲ್ಲಿ ಪಾಸ್ ಆಗಿದೆ. ಮಸೂದೆ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ಬಿಲ್ನ ಚರ್ಚೆ ಸಂದರ್ಭದಲ್ಲಿ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿದೆ ಎಂದರು.