ಬೆಂಗಳೂರು: ಭಾರತ-ಪಾಕಿಸ್ತಾನ ನಡುವೆ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿ ಇಂದು ನಡೆಯಲಿದ್ದು, ಕ್ರಿಕೆಟ್ ಪ್ರಿಯರು ಕೊಂಚ ಹೆಚ್ಚು ಉತ್ಸಾಹದಿಂದಲೇ ಕಾತುರತೆಯಿಂದ ಕಾದು ಕುಳಿತಿದ್ದಾರೆ. ಜೊತೆಗೆ ಟೀಂ ಇಂಡಿಯಾಕ್ಕೆ ಪ್ರತಿಯೊಬ್ಬರು ಶುಭ ಕೋರುತ್ತಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕೂಡ ಭಾರತ ತಂಡಕ್ಕೆ ಶುಭಾಶಯ ತಿಳಿಸಿದ್ದು, 'ಈ ಸಲ ಕಪ್ ನಮ್ದೇ' ಎಂದು ಹುರಿದುಂಬಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಿರಾಟ್ ಕೊಹ್ಲಿ ಹಾಗೂ ಕರ್ನಾಟಕದವರೇ ಆದ ಕೆ.ಎಲ್.ರಾಹುಲ್ ತುಂಬಾ ಇಷ್ಟವಾಗ್ತಾರೆ. ನನಗೆ ಬೌಲಿಂಗ್ಗಿಂತ ಬ್ಯಾಟಿಂಗ್ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿಕ್ಸ್, ಫೋರ್ ಹೊಡೆಯೋದು ಅಂದರೆ ಇಷ್ಟ ಎಂದು ಕ್ರಿಕೆಟ್ ಮೇಲಿನ ಕ್ರೇಜ್ ಬಗ್ಗೆ ಇದೇ ವೇಳೆ ತಿಳಿಸಿದರು.