ಬೆಂಗಳೂರು: ಕುತ್ತಿಗೆ ಕೊಯ್ದು, ಕುತುಂತ್ರ ರಾಜಕೀಯ ಮಾಡಿ ಬೆಳೆದುಕೊಂಡು ಬಂದವರು ಇವರು. ಸಾಧನೆ, ಪ್ರಗತಿ, ಬದಲಾವಣೆ ಮಾಡಿದ್ದೇನೆ ಎಂದು ಹೇಳಿ ರಾಜಕೀಯ ಮಾಡಿದವ ಇತಿಹಾಸವಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಸಹೋದರರಿಗೆೆ ಟಾಂಗ್ ನೀಡುತ್ತಾ, ಅವರು ತಂತ್ರ, ಕುತಂತ್ರ ಮಾಡಿ ಬಾಳಿ ಬದುಕಿದವರು. ಅವರ ಹಿನ್ನೆಲೆ ರಾಜ್ಯದ ಜನರಿಗೆ ಗೊತ್ತು. ರಾಮನಗರದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಅವರು ಅವಮಾನ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಜಿಲ್ಲೆ ಜನರ ಒತ್ತಾಯ ಇತ್ತು. ಅಲ್ಲಿನ ಪ್ರತಿನಿಧಿಗಳು ಬಂದು ಅನಾವರಣಕ್ಕೆ ಒತ್ತಾಯಿಸಿದ್ದರು. ಎರಡು ವರ್ಷ ಆದ್ರೂ ಆಗಿರಲಿಲ್ಲ, ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸಿದಾಗ ಬರಲು ಒಪ್ಪಿದ್ದರು.
ಕಾರ್ಯಕ್ರಮ ಪ್ರೊಟೋಕಾಲ್ ಪ್ರಕಾರ ನಡೆಯುತ್ತಿದ್ದರಿಂದ ಪುಷ್ಪಾರ್ಚನೆ ಮಾಡಲು ಮೂರು ಜನರಿಗೆ ಮಾತ್ರ ಅವಕಾಶ ಇತ್ತು. ಹೀಗಾಗಿ ನಾನು, ಸಿಎಂ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೋದೆವು. ಕಾರ್ಯಕ್ರಮ ವೇಳೆ ಅವರು ಇನ್ನೂ ಬಂದಿರಲಿಲ್ಲ. ನನ್ನ ಬಿಟ್ಟು ಮಾಡಿದ್ದೀರಾ ಅಂತ ಹೇಳಿದ್ದಕ್ಕೆ ಮುಂದಿನ ಕಾರ್ಯಕ್ರಮದಲ್ಲಿ ಅವರಿಗೆ ಅವಕಾಶ ನೀಡಿದೆವು. ಸಭಾ ಕಾರ್ಯಕ್ರಮಕ್ಕೆ ಹೋದಾಗ ಒಂದಷ್ಟು ಬಂಟರು, ಹಿಂಬಾಲಕರು DK, DK ಅಂತ ಘೋಷಣೆ ಕೂಗಿದ್ರು. ಘೋಷಣೆ ಕೂಗಲೆಂದೇ 50-100 ಮಂದಿಯ ತಂಡ ಅದು. ಸಿಎಂ ಬಂದಾಗ ಅಡಚಣೆ ಮಾಡಿದ್ರೆ, ಕಾನೂನು ರೀತಿ ಏನು ಮಾಡಬಹುದಿತ್ತು ಎಂಬುದು ಗೊತ್ತಿದೆ. ಇದೇ ಕಾಂಗ್ರೆಸ್ ಕಾರ್ಯಕ್ರಮ ಆಗಿದ್ರೆ ಏನೂ ಮಾಡ್ತಿದ್ರೂ ಎಂಬುದೂ ಗೊತ್ತಿದೆ. ಆದ್ರೂ ನಾವು ಏನೂ ಮಾಡಲಿಲ್ಲ. ಪದೇ ಪದೇ ಕೆಣಕಿ, ಪೂರ್ವ ಯೋಜಿತವಾಗಿ ಮಾಡಿರೋ ಕೆಲಸ ಅದು ಎಂದು ಆರೋಪಿಸಿದರು.
ನಮ್ಮ ಯೋಜನೆ ನೋಡಿ ಭಯ ಬಂದಿದೆ: