ಬೆಂಗಳೂರು: ಟೀಂ ದ್ವಿಚಕ್ರ ಮತ್ತು ಇಂಚರ ಸ್ಟುಡಿಯೋ ವತಿಯಿಂದ ಅಪ್ಪು ಅಗಲಿದ ಒಂದು ತಿಂಗಳ ನೆನಪಿನಲ್ಲಿ ಇಂದು ‘ರೈಡ್ ಫಾರ್ ಅಪ್ಪು’ ಬೈಕ್ ಮೆರವಣಿಗೆ ಆಯೋಜಿಸಲಾಗಿತ್ತು. ಈ ಮೆರವಣಿಗೆಗೆ ಮಲ್ಲೇಶ್ವರ ಕ್ಷೇತ್ರದ ಶಾಸಕ, ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಚಾಲನೆ ನೀಡಿದರು.
ಫ್ರೀಡಂ ಪಾರ್ಕ್ನಿಂದ ಅಪ್ಪು ಸಮಾಧಿಯವರೆಗೆ ನಡೆದ ಮೆರವಣಿಗೆಯಲ್ಲಿ ಸುಮಾರು 200 ಬೈಕ್ ಸವಾರರು ಪಾಲ್ಗೊಂಡಿದ್ದರು. ಪುನೀತ್ ಅವರು ಹೆಲ್ಮೆಟ್ ಧರಿಸುವುದರ ಮಹತ್ವ ಮನಗಾಣಿಸುವ ಜಾಹೀರಾತಿನ ಮೂಲಕ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದ್ದನ್ನು ನೆನೆದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಸಚಿವ ಅಶ್ವತ್ಥ್ ನಾರಾಯಣ ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.