ಕರ್ನಾಟಕ

karnataka

ETV Bharat / city

ಬಿಸಿಯೂಟ ನೌಕರರಿಗೆ ಗುಡ್​​ ನ್ಯೂಸ್ ​​: ಗೌರವಧನ ₹1,000 ಹೆಚ್ಚಿಸಿ ಆದೇಶ - ಬಿಸಿಯೂಟ ನೌಕರರ ಗೌರವಧನ ಹೆಚ್ಚಿಸಿ ಆದೇಶ

ಈ ಮೊದಲು ಮುಖ್ಯ ಅಡುಗೆಯವರಿಗೆ ಮಾಸಿಕ ರೂ. 2,700 ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ರೂ 2,600 ಗೌರವ ಸಂಭಾವನೆಯನ್ನು ಪಾವತಿಸಲಾಗುತಿತ್ತು. ಇದೀಗ ಬಜೆಟ್ ಘೋಷಣೆಯಂತೆ 2022-23 ಸಾಲಿನ ಶೈಕ್ಷಣಿಕ ವರ್ಷದಿಂದ ಗೌರವ ಧನವನ್ನು 1,000 ರೂ.ಗೆ ಹೆಚ್ಚಿಸಲಾಗಿದೆ..

Bengaluru
ಬೆಂಗಳೂರು

By

Published : Apr 8, 2022, 6:47 AM IST

ಬೆಂಗಳೂರು :2022-23ನೇ ಸಾಲಿನ ಆಯವ್ಯಯ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ನೀಡಲಾಗುವ ಮಾಸಿಕ ಗೌರವ ಸಂಭಾವನೆಯನ್ನು ತಲಾ 1,000 ರೂ. ಗಳಷ್ಟು ಹೆಚ್ಚಿಸಿ ಆದೇಶಿಸಲಾಗಿದೆ.

ಮುಖ್ಯ ಅಡುಗೆಯವರಿಗೆ ಮಾಸಿಕ ರೂ. 3,700 ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ರೂ. 3600 ಗೌರವ ಸಂಭಾವನೆಯನ್ನು ಪಾವತಿಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರ ಮಾಸಿಕ ಸಂಭಾವನೆಯನ್ನು ಡಿಬಿಟಿ (Direct Benefit Transfer) ಮೂಲಕ ಪಾವತಿಸಬೇಕು.

ಈ ಮೊದಲು ಮುಖ್ಯ ಅಡುಗೆಯವರಿಗೆ ಮಾಸಿಕ ರೂ. 2,700 ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ರೂ 2,600 ಗೌರವ ಸಂಭಾವನೆಯನ್ನು ಪಾವತಿಸಲಾಗುತಿತ್ತು. ಇದೀಗ ಬಜೆಟ್ ಘೋಷಣೆಯಂತೆ 2022-23 ಸಾಲಿನ ಶೈಕ್ಷಣಿಕ ವರ್ಷದಿಂದ ಗೌರವ ಧನವನ್ನು 1,000 ರೂ.ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ:'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್‌ ಅವರನ್ನೊಮ್ಮೆ ನೋಡಿ!

ABOUT THE AUTHOR

...view details