ಕರ್ನಾಟಕ

karnataka

ETV Bharat / city

ಜೂನ್‌ನಿಂದ ಕೆಂಗೇರಿ ವಿಸ್ತರಿತ ಮೆಟ್ರೋ ಸಂಚಾರ ಆರಂಭ ! - bangalore metro news

ಈ ಮಾರ್ಗದಲ್ಲಿ ದಿನಕ್ಕೆ ಒಟ್ಟು 75 ಸಾವಿರ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ತಿಳಿಸಿದ್ದಾರೆ.

  Metro Traffic to begin in June
Metro Traffic to begin in June

By

Published : May 20, 2021, 4:46 PM IST

ಬೆಂಗಳೂರು: ಜೂನ್ ತಿಂಗಳಲ್ಲಿ ನಮ್ಮ ಮೆಟ್ರೋ ಮೈಸೂರು ರಸ್ತೆ ವಿಸ್ತರಿತ ಮಾರ್ಗವಾದ ಕೆಂಗೇರಿಯವರೆಗೆ ಸಂಚಾರ ಆರಂಭವಾಗಲಿದೆ.

ಈ ಮೊದಲೇ ಏ.3ರಿಂದು ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿತ್ತು. ಮೆಟ್ರೋ ನಿರ್ಮಾಣದ ಕಾಮಗಾರಿ ಎಲ್ಲವೂ ಮುಗಿದಿದ್ದು, ಪ್ರತಿ ನಿಲ್ದಾಣಗಳಿಗೂ ಅಂತಿಮ ಸ್ಪರ್ಶ ನೀಡಲಾಗುತ್ತಿದೆ ಮತ್ತು ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ ಹಾಗೂ ಕೆಂಗೇರಿ ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ಮಾರ್ಗದಲ್ಲಿ ದಿನಕ್ಕೆ ಒಟ್ಟು 75 ಸಾವಿರ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಕಾಮಗಾರಿ‌ಯನ್ನ ಪರಿಶೀಲಿಸಿ‌ ತಿಳಿಸಿದ್ದಾರೆ.

ಇನ್ನು 7.53 ಕಿ.ಮೀ. ಉದ್ದದ ರೈಲಿನ ಮಾರ್ಗ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ ಮತ್ತು ಕೆಂಗೇರಿಯಲ್ಲಿ ಮೆಟ್ರೋ ನಿಲ್ದಾಣಗಳು ಈಗಾಗಲೇ ನಿರ್ಮಾಣವಾಗಿವೆ.

ABOUT THE AUTHOR

...view details