ಕರ್ನಾಟಕ

karnataka

ETV Bharat / city

ಸಾಯ್ತಿನಿ ಅಂತಾ ರೈಲಿನ ಮೇಲೆ ನಿಂತ... ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ಹೆಣವಾದ! - undefined

ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥನೋರ್ವ ಎಲ್ಲರೆದುರೇ ಹೆಣವಾಗಿದ್ದಾನೆ. ಸಾಯ್ತಿನಿ ಅಂತಾ ರೈಲು ಏರಿ ಹೆದರಿಸಲು ಹೋಗಿ ಹೈಟೆನ್ಸ್​​ನ ವಿದ್ಯುತ್​ ತಂತಿ ಹಿಡಿದು ಒಂದೇ ಕ್ಷಣದಲ್ಲಿ ಪ್ರಾಣ ಬಿಟ್ಟಿದ್ದಾನೆ.

ಸಾಯುತ್ತೇನೆ ಎಂದು ಎದುರಿಸಲು ಹೋಗಿ ಸಾವನ್ನಪ್ಪಿದ ವ್ಯಕ್ತಿ

By

Published : Apr 25, 2019, 11:27 AM IST

ಬೆಂಗಳೂರು:ಸಾಯ್ತಿನಿ ಸಾಯ್ತಿನಿ ಎಂದು ಹೆದರಿಸಲು ಹೋಗಿ ಮಾನಸಿಕ ಅಸ್ವಸ್ಥನೋರ್ವ ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ನಡೆದಿದೆ.

ಸಾಯುತ್ತೇನೆ ಎಂದು ಹೆದರಿಸಲು ಹೋಗಿ ಕ್ಷಣಾರ್ಧದಲ್ಲಿ ಪ್ರಾಣಬಿಟ್ಟ ಮಾನಸಿಕ ಅಸ್ವಸ್ಥ

ಸಾವನ್ನಪ್ಪಿರುವ ವ್ಯಕ್ತಿಯ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈತ ನಿಂತಿದ್ದ ರೈಲನ್ನು ಏರಿ ಸಾಯುವುದಾಗಿ ಬೆದರಿಸುತ್ತಿದ್ದನಂತೆ. ಆಗ ಸ್ಥಳದಲ್ಲಿದ್ದವರು ಆತನನ್ನ ಕೆಳಗಿಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಮಾನಸಿಕ ಅಸ್ವಸ್ಥ ಹೈಟೆನ್ಷನ್ ವೈರ್​ಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ಅಲ್ಲಿನ ಜನರು ತಿಳಿಸಿದ್ದಾರೆ.

ಇನ್ನು ಈತ ಮಾನಸಿಕ ಅಸ್ವಸ್ಥನಾಗಿದ್ದು, ಮೆಜೆಸ್ಟಿಕ್ ಸುತ್ತಮುತ್ತ ತಿರುಗುತ್ತಿದ್ದನಂತೆ. ಆದರೆ ಇಂದು ಏಕಾಏಕಿ ಆತ್ಮಹತ್ಯೆ ಬೆದರಿಕೆ ಹಾಕಿ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಕುಟುಂಬ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details