ಕರ್ನಾಟಕ

karnataka

ETV Bharat / city

ಸೋಂಕಿತರಿಗೆ ಕಾಡುವ 14 ದಿನ, ದೈಹಿಕವಷ್ಟೇ ಅಲ್ಲ ಒಂಟಿತನದಿಂದ ಮಾನಸಿಕ ಯಾತನೆ, ಖಿನ್ನತೆ - Covid-19 update

ಸೋಂಕು ತಗಲಿದ ವ್ಯಕ್ತಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಸೇರಿದ್ರೆ ಕುಟುಂಬದವರು ಬಂದು ನೋಡುವಂತಿಲ್ಲ, ಸ್ನೇಹಿತರ ಆಸರೆಯೂ ಸಿಕ್ಕಲ್ಲ. ನಾಲ್ಕು ಗೋಡೆ ಮಧ್ಯೆ 14 ದಿನ ಕಾಲ ಆಸ್ಪತ್ರೆ ಇಲ್ಲ ಮನೆಯಲ್ಲಿ ಕಳೆಯಬೇಕು. ಈ ಸಮಯದಲ್ಲಿ ಒಂಟಿತನದಿಂದ ಮಾನಸಿಕ ಖಿನ್ನತೆ ಕಾಡುವುದು ಸಾಮಾನ್ಯ.

mental-illustration
ಮಾನಸಿಕ ಖಿನ್ನತೆ

By

Published : Sep 9, 2020, 6:09 PM IST

ಬೆಂಗಳೂರು:ಕೊರೊನಾ ವೈರಸ್. ಇದರ ಮುಂದೆ ಬೇರೆ ಯಾವ ರೋಗವೂ ಇಷ್ಟರ ಮಟ್ಟಿಗೆ ಕಾಡಲಿಲ್ಲ. ಕುಟುಂಬದವರಿಗೆ ಅನಾರೋಗ್ಯ ಸಮಸ್ಯೆ ಅಂದರೆ ಸಾಕು ಊರುಗಳಿಂದ ಓಡಿ ಬರುತ್ತಿದ್ದ ಸಂಬಂಧಿಕರು, ಇದೀಗ ಕೊರೊನಾ‌ ಬಂದಿದೆ ಅಂದರೆ ಹತ್ತಿರವೂ ಸುಳಿಯದಷ್ಟು ಲಕ್ಷ್ಮಣ ರೇಖೆ ಹಾಕಿಕೊಂಡು ಬಿಟ್ಟಿದ್ದಾರೆ. ಕೋವಿಡ್​​​ನಿಂದ ಬಳಲುತ್ತಿದ್ದಾರೆ ಎಂದರೆ ಜನರ ಮನೋಭಾವವೇ ಬದಲಾಗುತ್ತಿದೆ.

ಕೊರೊನಾ ಬರದಂತೆ ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್, ಕೈ ಸ್ವಚ್ಛ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಇದರ ಲಕ್ಷಣವೇ ಒಬ್ಬರಿಂದ ನೂರು ಮಂದಿಗೆ ವೈರಸ್ ಬಹುಬೇಗ ಹರಡಿ ಬಿಡುತ್ತದೆ.‌ ಆದರೆ, ಕೊರೊನಾದಿಂದ ಹಲವರು ಮೌಢ್ಯ ನಂಬಿಕೆಗೂ ಒಳಗಾಗಿದ್ದು ಇದೆ. ಹೀಗಾಗಿಯೇ ತಜ್ಞ ವೈದ್ಯರು ಹೇಳುವುದು ಕೊರೊನಾವನ್ನು ಕೇವಲ ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿ ಎದುರಿಸುವ ಅನಿವಾರ್ಯತೆ ಇದೆಯೆಂದು.

ಸೋಂಕು ತಗಲಿದ ವ್ಯಕ್ತಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಸೇರಿದರೆ ಕುಟುಂಬದವರು ಬಂದು ನೋಡುವಂತಿಲ್ಲ. ಸ್ನೇಹಿತರ ಆಸರೆಯಾಗಲಿ ಇರುವುದಿಲ್ಲ. ಬದಲಿಗೆ 14 ದಿನಗಳ ಕಾಲ ಆಸ್ಪತ್ರೆವಾಸ ಕಳೆಯಬೇಕು. ಈ ಸಮಯದಲ್ಲಿ ರೋಗಿಗೆ ಮಾನಸಿಕ ಖಿನ್ನತೆ ಕಾಡುವುದು ಒಂಟಿತನದಿಂದ ನರಳುವುದು ಸಾಮಾನ್ಯ.

ಮಾನಸಿಕ ಸಮಸ್ಯೆ ಹೆಚ್ಚು:ಸೋಂಕಿತರ ಮನಸ್ಸಿನಲ್ಲಿ ನಮಗೆ ಯಾರು ಇಲ್ಲವೇನೋ. ಏನಾದರೂ ಸಮಸ್ಯೆಯಾದರೆ ಯಾರು ನನ್ನ ಕಷ್ಟಕ್ಕೆ ಆಗುವುದಿಲ್ಲವೇ? ಏನಾಗಿ ಬಿಡುತ್ತದೋ ಎಂಬ ಯೋಚನೆಗಳೇ ಕಾಡುತ್ತವೆ. ಈ ರೀತಿ ಯೋಚನೆಗಳು ಜಾಸ್ತಿಯಾದರೆ ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ ಎನ್ನುತ್ತಾರೆ ರಾಮಯ್ಯ ಆಸ್ಪತ್ರೆಯ ಮನಶಾಸ್ತ್ರಜ್ಞ ಡಾ.ಹೆಚ್.ಎಸ್.ವಿರೂಪಾಕ್ಷ.

ಸೋಂಕಿತರಿಗೆ ಕಾಡುವ 14 ದಿನ

ಒತ್ತಡದಿಂದಾಗಿ ಏಕಾಗ್ರತೆ ಸಮಸ್ಯೆ, ಉತ್ಸಾಹ ಕಳೆದುಕೊಳ್ಳುವುದು, ಆಲಸ್ಯ, ಭಯ ಶುರುವಾಗುತ್ತದೆ. ಇಂತಹ ಸಮಸ್ಯೆಗಳು ಎಲ್ಲರನ್ನೂ ಕಾಡಲಿದ್ದು, ಅದರಲ್ಲೂ ಮಕ್ಕಳು, ಹಿರಿಯರಲ್ಲಿ ಹೆಚ್ಚು. ಇದು ನಿದ್ರಾಹೀನತೆಗೂ ದಾರಿ ಮಾಡಿಕೊಡಲಿದೆ. ಮಾನಸಿಕ‌ ಸ್ಥಿಮಿತ ಕಳೆದುಕೊಂಡು ಅನವಶ್ಯಕ ಕೋಪ ಮಾಡಿಕೊಳ್ಳುವ ಪ್ರಸಂಗಗಳು ನಡೆಯುತ್ತವೆ. ‌ಈ ಸಮಯದಲ್ಲಿ ಬೇರೆ ವಿಧಾನದಲ್ಲಿ ನಮ್ಮನ್ನು ನಾವು ಬ್ಯುಸಿಯಾಗಿಸಿಕೊಳ್ಳಬೇಕು. ಪುಸ್ತಕ ಓದುವುದು, ಸಿನಿಮಾ ನೋಡುವುದು, ಜೊತೆಗೆ ಸ್ನೇಹಿತರು, ಕುಟುಂಬ ಸದಸ್ಯರಿಗೆ ಕರೆ ಮಾಡಿ ಮಾತನಾಡಬೇಕು ಎನ್ನುತ್ತಾರೆ ಅವರು.

ಮನುಷ್ಯರಂತೆ ಕಾಣುವ ಮನಸ್ಥಿತಿ ಬರಲಿ:ಕೊರೊನಾ ಬಂದರೆ ಭಯ ಪಡುವ ಅಗತ್ಯವಿಲ್ಲ. ನಮ್ಮವರನ್ನು ದೂರ ಮಾಡುವುದು ಬೇಡ. ಬದಲಿಗೆ ಕೊರೊನಾ ಬಂದವರನ್ನು ಮನುಷ್ಯರಂತೆ ಕಾಣುವ ಮನಸ್ಥಿತಿ ಬದಲಾಗಬೇಕಿದೆ ಎನ್ನುತ್ತಾರೆ ಬೆಂಗಳೂರಿನ ವಿವೇಕನಗರ ವನ್ನಾರಪೇಟೆಯ ನಿವಾಸಿ ಎಂ.ಬಿ.ಸಿದ್ದೇಶ್ವರ ಎಂಬವರು.

ಮಾನಸಿಕ ಧೈರ್ಯ ಪಡೆದುಕೊಳ್ಳಲು ವೈದ್ಯರು ಮತ್ತು ಸೋಂಕಿನಿಂದ ಗುಣಮುಖರಾದವರ ಮಾತು

ತಮ್ಮ ಮಗ ಲಿಖಿತ್​​ಗೆ ಕೊರೊನಾ ಸೋಂಕು ತಗುಲಿದಾಗ, ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ. ಹೀಗಾಗಿ ಹೋಮ್​ ಐಸೋಲೇಷನ್​​​ನಲ್ಲೇ ಇರಬೇಕಾಯಿತು‌. ಮನೆಯವರೆಲ್ಲ ಅವನಿಗೆ ಮಾನಸಿಕ ಒತ್ತಡವನ್ನ ಕೊಡದೆ ಮನೆಯಲ್ಲೇ, ಸಾಮಾಜಿಕ ಅಂತರದೊಂದಿಗೆ ದೈನಂದಿನ ಚಟುವಟಿಕೆ ಮಾಡಿಕೊಳ್ಳಲು ಬಿಟ್ಟಿದ್ದೆವು. ಅವರೊಟ್ಟಿಗೆ ಮಾತಾಡಿದ ತಕ್ಷಣ ಕೊರೊನಾ ಬರಲ್ಲ, ಬದಲಿಗೆ ನೇರ, ಹತ್ತಿರದ ಸಂಪರ್ಕದಲ್ಲಿ ಇದ್ದರೆ ಬರುತ್ತದೆ ಎಂದರು.

ABOUT THE AUTHOR

...view details