ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಜನವರಿ‌ 4 ರಿಂದ ಮೆಮು, ಡೆಮು ರೈಲು ಸಂಚಾರ ಆರಂಭ - train start from January 4

ಕೊರೊನಾದಿಂದಾಗಿ ಇಷ್ಟು ದಿನ ವಿವಿಧ ಜಿಲ್ಲೆಗಳಿಗೆ ಓಡಾಡಲು ಸರಿಯಾದ ರೈಲು ವ್ಯವಸ್ಥೆ ಇರಲಿಲ್ಲ.‌ ಇದೀಗ ಮೆಮು ಹಾಗೂ ಡೆಮು ರೈಲುಗಳ ಸಂಚಾರ ಮತ್ತೆ ಆರಂಭವಾಗುತ್ತಿದೆ.‌ ಜನವರಿ‌ 4 ರಿಂದ ಹೆಚ್ಚುವರಿ ರೈಲುಗಳನ್ನು‌‌ ಓಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ.

ರೈಲು ಸಂಚಾರ
ರೈಲು ಸಂಚಾರ

By

Published : Jan 2, 2021, 10:43 PM IST

ಬೆಂಗಳೂರು:ಇಷ್ಟು ದಿನ ಜನರು ರಾಜ್ಯದ ಒಳಗೆ, ಸ್ಥಳೀಯ ಜಾಗಗಳಿಗೆ ಹೋಗಬೇಕಾದರೆ ಹೆಚ್ಚಿನ ರೈಲು ವ್ಯವಸ್ಥೆ ಇಲ್ಲದೆ ಪ್ಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈಗ ಹೆಚ್ಚುವರಿ ರೈಲುಗಳ ಸಂಚಾರ ಆರಂಭವಾಗುತ್ತಿದೆ. ಎಂದಿನಿಂದ, ಯಾವ ಮಾರ್ಗದಲ್ಲಿ ಹೆಚ್ಚಿನ‌ ರೈಲುಗಳು ಓಡಾಡುತ್ತವೆ ಎಂಬುದರ ಮಾಹಿತಿ ಇಲ್ಲಿದೆ.

ಜನವರಿ 4 ಸೋಮವಾರದಿಂದ ರಾಜ್ಯಾದ್ಯಂತ 15 ಜೋಡಿ ರೈಲುಗಳ ಸಂಚಾರ ಪುನಾರಂಭವಾಗಲಿದೆ.

ಬೆಂಗಳೂರಿನಿಂದ ಎಲ್ಲೆಲ್ಲಿಗೆ ರೈಲುಗಳ‌ ಸಂಚಾರ:

ಕೆಎಸ್​ಆರ್, ಬೆಂಗಳೂರು - ಮೈಸೂರು
ಕೆಎಸ್​ಆರ್, ಬೆಂಗಳೂರು - ಹೊಸೂರು
ಕೆಎಸ್​ಆರ್, ಬೆಂಗಳೂರು - ಮಾರಿಕುಪ್ಪಂ
ಯಶವಂತಪುರ - ಹಿಂದೂಪುರ
ಯಶವಂತಪುರ - ಬಾಣಸವಾಡಿ
ಬೆ.ಕಂಟೋನ್ಮೆಂಟ್ - ಬಾಣಸವಾಡಿ
ಯಶವಂತಪುರ - ಹಾಸನ
ಯಶವಂತಪುರ - ತುಮಕೂರು
ಯಶವಂತಪುರ - ಅರಸಿಕೆರೆ
ಯಶವಂತಪುರ -ಧರ್ಮಪುರಿ
ಯಶವಂತಪುರ - ಬಂಗಾರಪೇಟೆ

ಈ ಮಾರ್ಗಗಳೂ ಸೇರಿದಂತೆ ವಿವಿಧ ಹಲವು ಜಿಲ್ಲೆಗಳ ನಡುವೆ ರೈಲು ಸಂಚಾರ ಆರಂಭವಾಗಲಿದೆ. ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಮೊದಲಿದ್ದ 6 ರೈಲುಗಳ‌ ಸಮಯ ಬದಲಾಯಿಸಿ ಹೆಚ್ಚುವರಿ 15 ಜೋಡಿ ರೈಲುಗಳನ್ನು‌ ಓಡಿಸಲು ನಿರ್ಧರಿಸಲಾಗಿದೆ.

ಹಬ್ಬದ ಪ್ರಯುಕ್ತ ವಿಶೇಷ ರೈಲುಗಳು ಹಾಗೂ ಹೊರ ರಾಜ್ಯದ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇರಲ್ಲ.

ABOUT THE AUTHOR

...view details