ಬೆಂಗಳೂರು: ಕೊರೊನಾ ಭೀತಿ ಎಲ್ಲೆಡೆ ಹಬ್ಬಿದ್ರೂ ಬಿಬಿಎಂಪಿ ಏನೂ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಮಾಸ್ಕ್ ಧರಿಸಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ಘಟನೆ ಇಂದು ನಡೆದಿದೆ.
ಕೊರೊನಾ ಭೀತಿ: ಮಾಸ್ಕ್ ಧರಿಸಿ ಕೌನ್ಸಿಲ್ ಸಭೆಗೆ ಬಂದ ಬಿಬಿಎಂಪಿ ಸದಸ್ಯರು! - ಹೌದು ಶೇಕ್ ಹ್ಯಾಂಡ್ ಬೇಡ, ದೇಶದ ಸಂಸ್ಕೃತಿಯಂತೆ ಕೈ ಮುಗಿದರೆ ಸಾಕು
ಕೊರೊನಾ ಭೀತಿ ಎಲ್ಲೆಡೆ ಹಬ್ಬಿದ್ರೂ ಬಿಬಿಎಂಪಿ ಏನೂ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಮಾಸ್ಕ್ ಧರಿಸಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ಘಟನೆ ಇಂದು ನಡೆದಿದೆ.
ಒಂದೆಡೆ ಜಲಮಂಡಳಿಗೆ ಸಂಬಂಧಿಸಿದ ವಿಚಾರ ಮಾತನಾಡಿ ಎಂದು ಬಿಜೆಪಿ ಪಾಲಿಕೆ ಸದಸ್ಯರು ಒತ್ತಾಯಿಸಿದ್ರೆ, ಕಾಂಗ್ರೆಸ್ ಸದಸ್ಯರು ಕೊರೊನಾ ಬಗ್ಗೆ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದರು. ಕೇವಲ ಎರಡು ಸಭೆ ನಡೆಸಿದ್ದು ಬಿಟ್ಟರೆ ನಗರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರು ಭೀತಿಯಿಂದ ಇದ್ದಾರೆ. ಮಾಸ್ಕ್ ಧರಿಸುವ ಬಗ್ಗೆಯೂ ಸರಿಯಾದ ಅರಿವು ಜನರಿಗಿಲ್ಲ. ಈ ಬಗ್ಗೆ ಆಯುಕ್ತರು ಉತ್ತರಿಸಬೇಕೆಂದು ವಿಪಕ್ಷ ನಾಯಕ ವಾಜಿದ್ ಒತ್ತಾಯಿಸಿದರು.
ನಿಮ್ಮ ಸಚಿವರು ಶೇಕ್ ಹ್ಯಾಂಡ್ ಕೊಡದಂತೆ ಎಚ್ಚರಿಸಿದ್ದಾರೆ. ಇನ್ನೇನು ಬರೀ ಕೈ ಮುಗಿಯಬೇಕಾ ಎಂದು ವಾಜಿದ್ ಕೇಳಿದಾಗ, ಹೌದು ಶೇಕ್ ಹ್ಯಾಂಡ್ ಬೇಡ. ದೇಶದ ಸಂಸ್ಕೃತಿಯಂತೆ ಕೈ ಮುಗಿದರೆ ಸಾಕು ಎಂದು ತಿರುಗೇಟು ನೀಡಿದರು. ಒಟ್ಟಿನಲ್ಲಿ ಕೊರೊನಾ ವೈರಸ್ ಭೀತಿ ಬಗ್ಗೆ ಕೌನ್ಸಿಲ್ ಸಭೆಯಲ್ಲೂ ಚರ್ಚೆಯಾಯಿತು.