ಬೆಂಗಳೂರು: ದೆಹಲಿಯ ನಿಜಾಮುದ್ದೀನ್ನ ಮರ್ಕಾಜ್ ಕಟ್ಟಡದಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ನಾಪತ್ತೆಯಾಗಿರುವ ಹಿನ್ನೆಲೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಈ ಕುರಿತು ಬರೆದುಕೊಂಡಿರುವ ಅನಂತ್ ಕುಮಾರ್ ಹೆಗಡೆ ಸೋಂಕಿತರಾದ ತಬ್ಲಿಘಿ ಜಮಾತ್ ಸದಸ್ಯರು ದೇಶಪೂರ್ತಿ ಓಡಾಡಿ, ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ವೈರಾಣು ತಡೆಗೆ ಕೇಂದ್ರ ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
'ತಬ್ಲಿಘಿ'ಗಳಿಂದ ದೇಶಾದ್ಯಂತ ಕೊರೊನಾ ಹರಡುವ ಸಂಚು: ಸಂಸದ ಅನಂತಕುಮಾರ್ ಹೆಗಡೆ ಆರೋಪ - lockdown
ನಿಜಾಮುದ್ದೀನ್ನಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದೇಶದಲ್ಲೆಡೆ ಕೊರೊನಾ ಸೋಂಕು ಹರಡಿಸುತ್ತಿದ್ದು, ಚಿಕಿತ್ಸೆಗೂ ಸಹಕಾರ ನೀಡುತ್ತಿಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಅನಂತ್ ಕುಮಾರ್ ಹೆಗಡೆ
ಇದರ ಜೊತೆಗೆ ತಬ್ಲಿಘಿ ಜಮಾತ್ನ ಮುಖ್ಯಸ್ಥ ಸೇರಿ ಹಲವರು ಎಲ್ಲೆಲ್ಲೋ ತಲೆ ತಪ್ಪಿಸಿಕೊಂಡಿದ್ದಾರೆ. ಕೆಲವರು ಮಸೀದಿಗಳಲ್ಲಿ ಅವಿತುಕೊಂಡಿದ್ದಾರೆ. ಎಷ್ಟೇ ವಿನಂತಿ ಮಾಡಿದ್ರೂ ಸೋಂಕು ತಪಾಸಣೆಗೆ ಒಪ್ಪುತ್ತಿಲ್ಲ. ಕ್ವಾರಂಟೈನ್ಲ್ಲಿರುವವರೂ ಕೂಡಾ ಆಸ್ಪತ್ರೆಗಳಲ್ಲಿ ದುರ್ವರ್ತನೆ ತೋರುತ್ತಿದ್ದಾರೆ. ವೈದ್ಯರು, ನರ್ಸ್ಗಳ ಮೇಲೆ ದುರ್ವತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಹಲವು ಪ್ರಶ್ನೆಗಳನ್ನು ಜನರ ಮುಂದಿಟ್ಟು.. ಮುಂದುವರೆಯುತ್ತದೆ ಎಂದು ಉಲ್ಲೇಖಿಸಿದ್ದಾರೆ.