ಕರ್ನಾಟಕ

karnataka

By

Published : Jun 2, 2021, 5:21 PM IST

ETV Bharat / city

ದೇಶದ ಕೊರೊನಾ ಸ್ಥಿತಿ - ಗತಿ: ಕಾಂಗ್ರೆಸ್ ಪಕ್ಷದಿಂದ ಮಹತ್ವದ ಸಭೆ..

ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದು, ಇದರ ಪ್ರಸ್ತುತ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ಪಕ್ಷ ದೇಶದ ಎಲ್ಲ ರಾಜ್ಯಗಳ ಮುಖಂಡರ ಜೊತೆ ಆನ್​​ಲೈನ್ ಮೂಲಕ ಮಹತ್ವದ ಸಭೆ ನಡೆಸಿದೆ.

significant-meeting-of-congress-party-
ಕಾಂಗ್ರೆಸ್ ಪಕ್ಷದಿಂದ ಮಹತ್ವದ ಸಭೆ

ಬೆಂಗಳೂರು:ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ, ಸಂಕಷ್ಟಕ್ಕೊಳಗಾದವರ ನೆರವಿಗೆ ಮುಂದಾಗಿರುವ ಕಾಂಗ್ರೆಸ್ ಪಕ್ಷ ಇಂದು ಮಹತ್ವದ ಸಭೆ ನಡೆಸಿದೆ.

ಕಾಂಗ್ರೆಸ್ ಪಕ್ಷದಿಂದ ಮಹತ್ವದ ಸಭೆ

ಓದಿ: ಕೋವಿಡ್​ ನಿರ್ವಹಣೆ; ಸರ್ಕಾರಕ್ಕೆ ಡಿಕೆಶಿ 10 ಪ್ರಶ್ನೆ

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಇಂದು ಪಿಸಿಸಿ, ಸಿಎಲ್​ಪಿ ಮುಖಂಡರ ಜೊತೆ ಸಭೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದರು. ಜ್ವರದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲಿಂದಲೇ ಹಾಜರಾಗಿದ್ದರು. ದೇಶದ ಎಲ್ಲ ರಾಜ್ಯಗಳ ಮುಖಂಡರು ಆನ್​​ಲೈನ್ ಮೂಲಕ ಪಾಲ್ಗೊಂಡು ಅಲ್ಲಿನ ಪರಿಸ್ಥಿತಿಯ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಕೋವಿಡ್ ಪರಿಸ್ಥಿತಿಯನ್ನು ಸಹ ರಾಜ್ಯ ಕಾಂಗ್ರೆಸ್ ನಾಯಕರು ವಿವರಿಸಿದರು. ನಾವು ಲಸಿಕೆ ಖರೀದಿಗೆ ಅನುದಾನ ನೀಡಲು ಮುಂದಾಗಿದ್ದು, ನಮ್ಮ ಶಾಸಕರು, ಸಂಸದರು ಹಣ ನೀಡಲು ಸಿದ್ಧ. 90 ಜನರ 90 ಕೋಟಿ ರೂ. ಹಾಗೂ ನಮ್ಮದು 10 ಕೋಟಿ ಒಟ್ಟು 100 ಕೋಟಿ ಹಣವನ್ನು ಅನುದಾನ ನೀಡಲು ಸಿದ್ಧರಿದ್ದೇವೆ. ಅದರಿಂದ ಲಸಿಕೆ ಖರೀದಿಸಿ ಜನರಿಗೆ ವಿತರಿಸಲು ನಿರ್ಧರಿಸಿದ್ದೇವೆ.

ಸರ್ಕಾರಕ್ಕೂ ಇದರ ಬಗ್ಗೆ ಪತ್ರ ಬರೆದಿದ್ದೇವೆ. ನಾವು ರಾಜ್ಯದಲ್ಲಿ ಸಹಾಯ ಮಾಡಿದ್ದು, ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೇವೆ. ಫುಡ್ ಕಿಟ್ ನೀಡಿಕೆ, ಸೋಂಕಿತರನ್ನು ಅಸ್ಪತ್ರೆಗೆ ದಾಖಲು ಮಾಡುವ ಕೆಲಸ ಮಾಡಿದ್ದು, ಬಡ ಸೋಂಕಿತರಿಗೆ ಚಿಕಿತ್ಸೆ ಸೌಲಭ್ಯ ಒದಗಿಸಿದ್ದಾರೆ. ನಾವು ಮೆಡಿಕಲ್‌ ಕಿಟ್‌ಗಳನ್ನೂ ನೀಡಿದ್ದು, ರೈತರು, ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ರೈತರ ಬೆಳೆಗಳನ್ನ ಖರೀದಿಸಿ ಉಚಿತವಾಗಿ ಹಂಚುತ್ತಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.

ಡಿಕೆಶಿ ಮಾತನಾಡಿ, ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರೈತರ ಜಮೀನಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದು, ಅಸಂಘಟಿತ ಕಾರ್ಮಿಕರ ಬಳಿಯೂ ಸಮಸ್ಯೆ ಆಲಿಸಿದ್ದೇನೆ. ತರಕಾರಿ ಖರೀದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು, ರಾಜ್ಯದ ಸಿಎಂಗೆ ಪತ್ರವನ್ನೂ ಬರೆದಿದ್ದೇನೆ. ನಾವು ಆದಷ್ಟು ಖರೀದಿಸಿ ಹಂಚುತ್ತಿದ್ದೇವೆ. ನಾಳೆ ಮತ್ತೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಜನರ ಸಂಕಷ್ಟಕ್ಕೆ ನಾವು ಸಂದಿಸುತ್ತಿದ್ದೇವೆ. ನಮ್ಮ ಕಾರ್ಯಕರ್ತರು ಸಹಾಯ ಹಸ್ತ ಚಾಚಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details